ಕೋಟೆ ಮಾರಿಕಾಂಬ ಜಾತ್ರೆ, ಅಮ್ಮನ ಮಡಿಲಿನಲ್ಲಿ ‘ಅಪ್ಪು’ ಭಾವಚಿತ್ರ, ವೈರಲ್ ಆಯ್ತು ವಿಡಿಯೋ

ಸುದ್ದಿ ಕಣಜ.ಕಾಂ | DISTRICT | MARIKAMBA JATRE
ಶಿವಮೊಗ್ಗ: ನಗರದ ಗಾಂಧಿ ಬಜಾರ್ ನಲ್ಲಿ ಮಂಗಳವಾರ ವಿದ್ಯುಕ್ತವಾಗಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಕೋಟೆ ಶ್ರೀ ಮಾರಿಕಾಂಬ ಜಾತ್ರೆಗೆ ಚಾಲನೆ ನೀಡಲಾಗಿದೆ.
ಬೆಳ್ಳಂಬೆಳಗ್ಗೆಯಿಂದಲೇ ಭಕ್ತರು ಮಾರಿಕಾಂಬ ದರ್ಶನಕ್ಕೆ ಆಗಮಿಸಿ, ಕೃತಾರ್ಥರಾಗುತ್ತಿದ್ದಾರೆ. ಭಕ್ತರು ತಮ್ಮ ಹರಕೆ ತೀರಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಭಾವಚಿತ್ರವನ್ನು ಅಮ್ಮನ ಮಡಿಲಿನಲ್ಲಿ ಇಟ್ಟು ಆತ್ಮಕ್ಕೆ ಶಾಂತಿ ಕೋರಲಾಗಿದೆ.

READ | ಮಾರಿಕಾಂಬ ಜಾತ್ರೆಗೆ ವಿದ್ಯುಕ್ತ ಚಾಲನೆ, ಗಾಂಧಿ ಬಜಾರ್‍ನಲ್ಲಿ ಅಮ್ಮನ ದರ್ಶನಕ್ಕೆ ಭಕ್ತರ ಸಾಲು

ವೈರಲ್ ಆಯ್ತು ವಿಡಿಯೋ
ಬೆಳಗ್ಗೆಯಿಂದ ಸಾಮಾಜಿಕ ಜಾಲತಾಣದಲ್ಲಿ ಎಲ್ಲಿಯೇ ನೋಡಿದರೂ ಮಾರಿಕಾಂಬ ಜಾತ್ರೆಯ ಫೋಟೊ, ವಿಡಿಯೋಗಳದ್ದೇ ಪಾರುಪತ್ಯ ಜೋರಾಗಿದೆ. ಜಾತ್ರೆಯಲ್ಲಿ ಹಲವರು ತೆಗೆಸಿಕೊಂಡಿರುವ ಚಿತ್ರಗಳನ್ನು ಹಾಕುತಿದ್ದಾರೆ. ಇದರ ನಡುವೆ ಅಮ್ಮನವರ ಮಡಿಲಿನಲ್ಲಿ ಅಪ್ಪುವಿನ ಭಾವಚಿತ್ರ ಇಡುವ ವಿಡಿಯೋವೊಂದು ಭಾರಿ ಸದ್ದು ಮಾಡಿದೆ.