ಸುದ್ದಿ ಕಣಜ.ಕಾಂ | TALUK | HEALTH NEWS
ತೀರ್ಥಹಳ್ಳಿ: ತಾಲೂಕಿನಲ್ಲಿ ಇಬ್ಬರಿಗೆ ಕೆ.ಎಫ್.ಡಿ (ಕ್ಯಾಸನೂರು ಅರಣ್ಯ ಕಾಯಿಲೆ) ಪಾಸಿಟಿವ್ ಬಂದಿದ್ದು, ಜನರು ಭೀತಿಗೀಡಾಗುವಂತಾಗಿದೆ.
READ | ತೀರ್ಥಹಳ್ಳಿಯಲ್ಲಿ ಮತ್ತೆ ಮಂಗನ ಕಾಯಿಲೆ ಉಪಟಳ
ಆಗುಂಬೆಯ ಕುಂದಾ ಗ್ರಾಮದ ಚಿಟ್ಟೆಗುಡ್ಡಯ ಕೂಲಿ ಕಾರ್ಮಿಕ ಮಹಿಳೆ ಜಯಮ್ಮ (45), ಹೊಸಬೀಡು ಗ್ರಾಮದ ಸುಜಾತಾ (45) ಎಂಬುವವರಲ್ಲಿ ಪಾಸಿಟಿವ್ ಬಂದಿದೆ. ರೋಗದ ಲಕ್ಷಣಗಳುಬಕಂಡುಬಂದ ಹಿನ್ನೆಲೆ ಅವರ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದ್ದು, ಸೋಂಕು ತಗುಲಿರುವುದು ದೃಢಪಟ್ಟಿದೆ.
ಬೇಸಿಗೆ ಹೊಸ್ತಿಲಲ್ಲೇ ಸೋಂಕು ಉಲ್ಬಣ
ಬೇಸಿಗೆ ಹೊಸ್ತಿಲಲ್ಲೇ ತೀರ್ಥಹಳ್ಳಿಯ ಕೆಲವೆಡೆ ಜನರಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿತ್ತು. ತಾಲೂಕಿನಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ.