ಭಾರತೀಪುರ ಕ್ರಾಸ್ ತಪ್ಪಿಸಲು ಅತ್ಯಾಧುನಿಕ ಮೇಲ್ಸೇತುವೆ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್, ಯಾವ ಕಾಮಗಾರಿಗೆಷ್ಟು ಅನುದಾನ

ಸುದ್ದಿ ಕಣಜ.ಕಾಂ | KARNATAKA | DEVELOPMENT 
ಶಿವಮೊಗ್ಗ: ಹಲವು ಅಪಘಾತಗಳಿಗೆ ಹಾಗೂ ಸಾವು ನೋವುಗಳಿಗೆ ಕಾರಣವಾಗಿದ್ದ ತೀರ್ಥಹಳ್ಳಿ-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಯ ಭಾರತೀಪುರ ಹೇರ್ ಪಿನ್ ತಿರುವನ್ನು ತಪ್ಪಿಸಿ, ಅತ್ಯಾಧುನಿಕ ಮೇಲ್ಸುತೇವೆ ನಿರ್ಮಾಣ ಕಾಮಗಾರಿಗೆ ಸೋಮವಾರ ಗ್ರೀನ್ ಸಿಗ್ನಲ್ ಸಿಕ್ಕಿದೆ.

ಕೇಂದ್ರ ಸರಕಾರದ ಹೆದ್ದಾರಿ ಮಂತ್ರಾಲಯ ಈ ಕಾಮಗಾರಿಗೆ ಅನುಮತಿ ನೀಡಿದ್ದು, 58 ಕೋಟಿ ರೂಪಾಯಿಗಳ ವೆಚ್ಚದ ಈ ಕಾಮಗಾರಿಯನ್ನು ಸದ್ಯದಲ್ಲಿಯೇ ಕೈಗೆತ್ತಿಕೊಳ್ಳಲಾಗುವುದು ಎಂದು ಸಂಸದ ಬಿ.ವೈ.ರಾಘವೇಂದ್ರ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೇಲ್ಸೇತುವೆ ನಿರ್ಮಾಣದ ಅಗತ್ಯದ ಕುರಿತು ಈ ಹಿಂದೆ ಸಲ್ಲಿಸಿದ ಮನವಿಗೆ ಸ್ಪಂದಿಸಿ ಅನುದಾನ ಬಿಡುಗಡೆಯಾಗಿದೆ. ಮೇಲ್ಸೇತುವೆ ಅಗತ್ಯದ ಬಗ್ಗೆ ಕೇಂದ್ರ ಸಚಿವರ ಮನವರಿಕೆ ಮಾಡಲಾಗಿದೆ. ಯೋಜನೆಯನ್ನು ಕಾರ್ಯಗತಗೊಳಿಸಲು ತಿಳಿಸಿದ್ದಾರೆ.
ಯಾವ್ಯಾವ ಕಾಮಗಾರಿಗೆ ಅಸ್ತು
ಭಾರತೀಪುರ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಮಾತ್ರವಲ್ಲದೆ, ಕೇಂದ್ರ ಹೆದ್ದಾರಿ ಮಂತ್ರಾಲಯ ತೀರ್ಥಹಳ್ಳಿ ತಾಲೂಕು ಮೇಗರವಳ್ಳಿಯಿಂದ ಆಗುಂಬೆವರೆಗೆ 14.77 ಕಿಲೊಮೀಟರ್ ರಾಷ್ಟ್ರೀಯ ಹೆದ್ದಾರಿ `169-ಎ’ಗೆ ದ್ವಿಪಥ ಪಿಎಸ್ (10 ಮೀಟರ್) ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು 96.20 ಕೋಟಿ ರೂಪಾಯಿಗೆ ಅನುಮೋದನೆ ಸಹ ನೀಡಲಾಗಿದೆ ಎಂದು ಸಚಿವ ಆರಗ ತಿಳಿಸಿದ್ದಾರೆ.
ಎರಡೂ ಕಾಮಗಾರಿಗಳಿಗೆ ಅನುಮತಿ ನೀಡಿ ಅನುದಾನ ಬಿಡುಗಡೆ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅಭಿನಂದನೆ ಸಲ್ಲಿಸಲಾಗಿದೆ.