ಸುದ್ದಿ ಕಣಜ.ಕಾಂ | TALUK | CRIME NEWS
ಭದ್ರಾವತಿ: ತಾಲೂಕಿನ ಬಸವನಗುಡಿ ಗ್ರಾಮ ಸಮೀಪ ಪಿಕಪ್ ವಾಹನ ಮತ್ತು ಗೂಡ್ಸ್ ಆಟೋ ನಡುವೆ ಭಾನುವಾರ ರಾತ್ರಿ ಡಿಕ್ಕಿ ಸಂಭವಿಸಿ ಗೂಡ್ಸ್ ಆಟೋ ಚಾಲಕ ಮೃತಪಟ್ಟಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ಕಲ್ಲೇನಹಳ್ಖಿಯ ನೂರ್ ಅಹ್ಮದ್ (44) ಮೃತಪಟ್ಟಿದ್ದಾರೆ. ಅಪಘಾತದ ರಭಸಕ್ಕೆ ಈತ ಸ್ಥಳದಲ್ಲೇ ಮೃತಪಟ್ಟಿದ್ದು, ಭದ್ರಾವತಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.