ಸುದ್ದಿ ಕಣಜ.ಕಾಂ | DISTRICT | CRIME NEWS
ಶಿವಮೊಗ್ಗ: ಮಕ್ಕಳ ಅಶ್ಲೀಲತೆ ಮತ್ತು ಲೈಂಗಿಕ ವಿಡಿಯೋ ಅನ್ನು ಅಪ್ ಲೋಡ್ ಮಾಡಿದ ವ್ಯಕ್ತಿಯೊಬ್ಬರ ವಿರುದ್ಧ ಶಿವಮೊಗ್ಗ ಎಸ್.ಇ.ಎನ್. ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ.
ಭದ್ರಾವತಿ ನ್ಯೂ ಟೌನ್ ಮೂಲದ ವ್ಯಕ್ತಿಯೊಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮಾಡಲಾಗುತ್ತಿದೆ.
ಗೊತ್ತಾಗಿದ್ದು ಹೇಗೆ?
2022ರ ಮಾರ್ಚ್ 22ರಂದು ಬೆಂಗಳೂರು ಸಿಐಡಿ ವಿಶೇಷ ಘಟಕದಿಂದ ಅಂಚೆ ಮೂಲಕ ಲಕೋಟೆಯನ್ನು ಕಳುಹಿಸಿದ್ದು, ಅದನ್ನು ಶಿವಮೊಗ್ಗದ ಸೈಬರ್ ಕ್ರೈಂ ಠಾಣೆಯವರು ಪರಿಶೀಲಿಸಿದ್ದು, ಅದರಲ್ಲಿ ಮಕ್ಕಳ ಅಶ್ಲೀಲತೆ ಬಗ್ಗೆ ದೂರು ದಾಖಲಿಸಲು ಸೂಚಿಸಿದ ಜ್ಞಾಪನ ಪತ್ರ ಮತ್ತು ಸೈಬರ್ ಟಿಪ್ ಲೈನ್ ಅಡಿ ಕಲಂ 65(ಬಿ) ಭಾರತೀಯ ಸಾಕ್ಷ್ಯ ಅಧಿನಿಯಮ 1872ರ ಪ್ರಮಾಣ ಪತ್ರ ಇತ್ತು. ನಂತರ, ಸೈಬರ್ ಟಿಪ್ ಲೈನ್ ಸಿಡಿ ಮಾಹಿತಿಯನ್ನು ಪರಿಶೀಲಿಸಲಾಗಿದ್ದು, 2021ರ ಜನವರಿ 28ರಂದು ವಿಡಿಯೋ ಅಪ್ ಲೋಡ್ ಮಾಡಿರುವ ಮತ್ತು ಆರೋಪಿಯ ವಿವರ ನೀಡಲಾಗಿದೆ.
ನಂತರ, ಬೆಂಗಳೂರಿನ ಸಿಐಡಿ ವಿಶೇಷ ಘಟಕದವರು ದೂರು ದಾಖಲಿಸಲು ನೀಡಿದ ಜ್ಞಾಪನೆ ಪತ್ರ ಮತ್ತು ಸಿಡಿಯಲ್ಲಿದ್ದ ಆರೋಪಿಯ ಫೇಸ್ಬುಕ್ ಮೆಸೆಂಜರ್ ನಲ್ಲಿ ವಿಡಿಯೋ ಹಾಕಿದ ಬಗ್ಗೆ ಇರುವ ಐಪಿ ವಿಳಾಸದ ಮಾಹಿತಿಯನ್ನು ಪ್ರಿಂಟ್ ತೆಗೆದು ಎಫ್.ಐ.ಆರ್. ದಾಖಲಿಸಲಾಗಿದೆ.