ರಾಜ್ಯದಲ್ಲಿ 15 ಸಾವಿರ ಶಿಕ್ಷಕರ ಹುದ್ದೆಗಳ ನೇಮಕಾತಿ, ಯಾರೆಲ್ಲ ಅರ್ಜಿ ಸಲ್ಲಿಸಬಹುದು, ಇಲ್ಲಿದೆ ಕಂಪ್ಲೀಟ್ ಮಾಹಿತಿ

 

 

ಸುದ್ದಿ ಕಣಜ.ಕಾಂ | KARNATAKA | JOB JUNCTION
ಬೆಂಗಳೂರು: ಶಿಕ್ಷಕರಾಗಲು ಕನಸು ಕಾಣುತ್ತಿರುವವರಿಗೆ ರಾಜ್ಯ ಸರ್ಕಾರ (Karnataka Government) ಶುಭ ಸುದ್ದಿ ನೀಡಿದೆ. ಇದಕ್ಕಾಗಿ ಕರ್ನಾಟಕ ರಾಜ್ಯಪತ್ರ ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತರು ಏಪ್ರಿಲ್ 22ರ ವರೆಗೆ ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಅವಕಾಶವಿದೆ.

ನೇಮಕಾತಿ ಸಂಸ್ಥೆ ಸಾರ್ವಜನಿಕ ಶಿಕ್ಷಣ ಇಲಾಖೆ (Karnataka Education Department Services)
ಉದ್ಯೋಗದ ಹೆಸರು ಪದವೀಧರ ಪ್ರಾಥಮಿಕ ಶಿಕ್ಷಕ(ಟಿಜಿಟಿ)
ಒಟ್ಟು ಹುದ್ದೆಗಳು 15,000
ಉದ್ಯೋಗದ ಸ್ಥಳ-  ಕರ್ನಾಟಕ
ವೇತನ ಶ್ರೇಣಿ  27,650ರಿಂದ 52,650 ರೂ.

ರಾಜ್ಯದಾದ್ಯಂತ ಸರ್ಕಾರಿ ಶಾಲೆಗಳಲ್ಲಿ 6ರಿಂದ 8ನೇ ತರಗತಿವರೆಗಿನ ಬೋಧನೆಗೆ 15,000 ಪದವೀಧರ ಶಿಕ್ಷಕರ(ಜಿಪಿಟಿ) ಹುದ್ದೆಗಳನ್ನು ಕರೆಯಲಾಗಿದೆ. ಮೇ 21 ಮತ್ತು 22ರಂದು ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿದ್ದು, ಅಭ್ಯರ್ಥಿಗಳು ಈಗಿನಿಂದಲೇ ಪೂರ್ವ ತಯಾರಿ ನಡೆಸಬಹುದು. ಮೇ 21ರಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 1ರ ವರೆಗೆ ಪತ್ರಿಕೆ 1, ಮಧ್ಯಾಹ್ನ 2.30ರಿಂದ ಸಂಜೆ 5.30 ಗಂಟೆಯವರೆಗೆ ಗಣಿತ, ವಿಜ್ಞಾನ, ಜೀವ ವಿಜ್ಞಾನ, ಸಮಾಜ ಹಾಗೂ ಮಧ್ಯಾಹ್ನ 2.30ರಿಂದ ಸಂಜೆ 4.30ರ ವರೆಗೆ ಪತ್ರಿಕೆ 3ರ ಪರೀಕ್ಷೆ ನಡೆಯಲಿದೆ. ಒಟ್ಟು 400 ಅಂಕಗಳಿಗೆ ಪರೀಕ್ಷೆ ನಡೆಯಲಿವೆ. 10,000 ಮೂಲ ಉಳಿಕೆ ವೃಂದ ಹಾಗೂ 5,000 ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳ ನೇಮಕಾತಿ ನಡೆಯಲಿದೆ.

READ | ಬೆಂಗಳೂರು ಕೇಂದ್ರೀಯ ವಿದ್ಯಾಲಯ ಎನ್.ಎ.ಎಲ್.ನಲ್ಲಿ 95 ಹುದ್ದೆ, ನಡೆಯಲಿದೆ ಸಂದರ್ಶನ

ಪ್ರಮುಖ ದಿನಾಂಕಗಳು
ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಆರಂಭ ದಿನಾಂಕ 23/03/2022
ಆನ್‍ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ 22/04/2022
ಅಪ್ಲಿಕೇಶನ್ ಶುಲ್ಕ ಪಾವತಿಸಲು ಕೊನೆ ದಿನಾಂಕ 22/04/2022
ಶಿಕ್ಷಕರ ನೇಮಕಾತಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ ದಿನಾಂಕ 2022ರ ಮೇ 21, 22.
ಯಾರೆಲ್ಲ ಅರ್ಜಿ ಸಲ್ಲಿಸಬಹುದು
ಖಾಲಿ ಇರುವ ಹುದ್ದೆಗಳ ನೇಮಕಾತಿ(Recruitment)ಗೆ ರಾಜ್ಯಪತ್ರ ಹೊರಡಿಸಿದ್ದು, ಅರ್ಜಿ ಸಲ್ಲಿಸುವವರು ಪದವಿಯಲ್ಲಿ ಕನಿಷ್ಠ ಶೇ.50ರಷ್ಟು ಅಂಕಗಳನ್ನು ಪಡೆದಿರಬೇಕು. ಜತೆಗೆ, ಪ್ರಾಥಮಿಕ ಶಿಕ್ಷಣ ತರಬೇತಿಯ ಎರಡು ವರ್ಷಗಳ ಡಿಪ್ಲೋಮಾದಲ್ಲಿ ಉತ್ತೀರ್ಣರಾಗಿರಬೇಕು. ಇಲ್ಲವೇ, ಡಿಗ್ರಿನಲ್ಲಿ ಶೇ.50 ಅಂಕ, ಬಿಎಡ್ ಪಾಸ್ ಆಗಿರಬೇಕು. ಅಥವಾ ವಿಶೇಷ ಶಿಕ್ಷಣ ಡಿಗ್ರಿ ಹೊಂದಿರಬೇಕು/ ಪಿಯುಸಿ(PUC)ಯಲ್ಲಿ ಶೇ.50 ಅಂಕ ಪಡೆದು ತೇರ್ಗಡೆಯಾಗಿರಬೇಕು ಮತ್ತು ನಾಲ್ಕು ವರ್ಷಗಳ ಬ್ಯಾಚಲರ್ ಆಫ್ ಎಲಿಮೆಂಟರಿ ಎಜುಕೇಶನ್ ಡಿಗ್ರಿ ಇಲ್ಲವೇ 4 ವರ್ಷಗಳ ಬಿಎಡ್ ಪಾಸ್ ಆಗಿರಬೇಕು ಎಂದು ಸೂಚನೆ ನೀಡಲಾಗಿದೆ.

READ | ಯಾವುದೇ ಪದವಿ ಪಾಸ್ ಆಗಿದ್ದರೂ ಮಂಗಳೂರಿನಲ್ಲಿ ಉದ್ಯೋಗ, ಮಾಸಿಕ 25 ಸಾವಿರ ಸಂಬಳ

ವಯೋಮಿತಿ, ಶುಲ್ಕದ ವಿವರ
ಅರ್ಜಿ ಸಲ್ಲಿಸಲು ಕನಿಷ್ಠ 21 ವರ್ಷ ಹೊಂದಿರತಕ್ಕದ್ದು. ಗರಿಷ್ಠ ವಯಸ್ಸು ಸಾಮಾನ್ಯ ಅಭ್ಯರ್ಥಿಗಳಿಗೆ 42 ವರ್ಷ, ಓಬಿಸಿ 45 ವರ್ಷ, ಎಸ್ಸಿ, ಎಸ್ಟಿ, ವಿಕಲಚೇತನರಿಗೆ 47 ವರ್ಷ.
ಎಸ್ಸಿ, ಎಸ್ಟಿ, ಪ್ರವರ್ಗ 1, ವಿಕಲಚೇತನರಿಗೆ 1 ಹುದ್ದೆಗೆ 625 ರೂ., 2 ಹುದ್ದೆಗಳಿಗೆ 1,250 ರೂ., ಹಾಗೂ ಇತರೆ ಎಲ್ಲ ಅಭ್ಯರ್ಥಿಗಳಿಗೆ 1 ಹುದ್ದೆಗೆ 1,250 ರೂ., 2 ಹುದ್ದೆಗಳಿಗೆ 2,500 ರೂ. ಶುಲ್ಕ ಪಾವತಿಸಬೇಕು.
(ಗಮನಕ್ಕೆ- ಹುದ್ದೆ, ವಯೋಮಿತಿ, ವಿದ್ಯಾರ್ಹತೆ ಇತ್ಯಾದಿಗಳ ಮಾಹಿತಿ ರಾಜ್ಯಪತ್ರ ಓದಿ- ಕ್ಲಿಕ್)

CLICK FOR NOTIFICATION

error: Content is protected !!