ಯಾವುದೇ ಪದವಿ ಪಾಸ್ ಆಗಿದ್ದರೂ ಮಂಗಳೂರಿನಲ್ಲಿ ಉದ್ಯೋಗ, ಮಾಸಿಕ 25 ಸಾವಿರ ಸಂಬಳ

 

 

ಸುದ್ದಿ ಕಣಜ.ಕಾಂ | KARNATAKA | JOB JUNCTION 
ಮಂಗಳೂರು: ಸೂರತ್ಕಲ್ ನಲ್ಲಿರುವ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ(National Institute of Technology Karnataka)ದಲ್ಲಿ ಉದ್ಯೋಗ ಲಭ್ಯವಿದೆ. ಆಸಕ್ತರು ಮಾರ್ಚ್ 28ರಂದು ನಡೆಯುವ ಸಂದರ್ಶನದಲ್ಲಿ ಭಾಗವಹಿಸಬಹುದು.

ಸಂಸ್ಥೆಯ ಹೆಸರು  ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ (ಎನ್.ಐ.ಟಿ. ಕರ್ನಾಟಕ)
ಹುದ್ದೆಗಳ ಸಂಖ್ಯೆ ನಿರ್ದಿಷ್ಟಪಡಿಸಲಾಗಿಲ್ಲ
ಉದ್ಯೋಗದ ಸ್ಥಳ  ಸೂರತ್ಕಲ್, ಮಂಗಳೂರು
ಹುದ್ದೆ ಹೆಸರು ಗಾರ್ಡನ್ ಸೂಪರ್ ವೈಸರ್
ಸಂಬಳ 25,000/ ಮಾಸಿಕ
ನೇಮಕಾತಿ ವಿಧಾನ ಲಿಖಿತ ಪರೀಕ್ಷೆ, ಸಂದರ್ಶನ

READ | 1,500 ಪೊಲೀಸ್ ಕಾನ್‍ಸ್ಟೇಬಲ್ ಹುದ್ದೆಗಳ ಭರ್ತಿಗೆ ಸಿದ್ಧತೆ, ಯಾವ ಜಿಲ್ಲೆಯಲ್ಲಿ ಹುದ್ದೆಗಳ ನೇಮಕಾತಿ, ಯಾವಾಗಿಂದ ಪ್ರಕ್ರಿಯೆ ಆರಂಭ

JOBS FB Link

ವಿದ್ಯಾರ್ಹತೆ, ವಯೋಮಿತಿ, ವೇತನ
ಅಭ್ಯರ್ಥಿಗಳು ಯಾವುದೇ ಪದವಿಯಲ್ಲಿ ತೇರ್ಗಡೆಯಾಗಿರಬಹುದು ಅಥವಾ ತೋಟಗಾರಿಕೆ ವಿಷಯದಲ್ಲಿ ಡಿಪ್ಲೋಮಾ ಅರ್ಹತೆ ಹೊಂದಿರಬೇಕು. ಅಂತಹವರು ಸಂದರ್ಶನಕ್ಕೆ ಹಾಜರಾಗಬಹುದಾಗಿದೆ.
ಗಾರ್ಡನ್ ಸೂಪರ್ ವೈಸರ್ ಹುದ್ದೆಯನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳುತ್ತಿದ್ದು, ಮಾಸಿಕ 25,000 ರೂಪಾಯಿ ವೇತನ ನೀಡಲಾಗುವುದು. ಅಭ್ಯರ್ಥಿಗಳು 8 ವರ್ಷಗಳ ಉದ್ಯಾನ ನಿರ್ವಹಣೆ ಹಾಗೂ ಮೂರು ವರ್ಷಗಳ ಗಾರ್ಡನ್ ಸೂಪರ್ ವೈಸರ್ ಆಗಿ ಕಾರ್ಯನಿರ್ವಹಣೆ ಮಾಡಿದ ಅನುಭವ ಹೊಂದಿರಬೇಕು. ಹಾಗೂ ಗರಿಷ್ಠ 40 ವರ್ಷ ಮೀರಿರಬಾರದು. ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ನಿಯಮಾವಳಿ ಪ್ರಕಾರ ವಯೋಮಿತಿ ಸಡಿಲಿಕೆ ನೀಡಲಾಗುವುದು.
ಆಯ್ಕೆ ಪ್ರಕ್ರಿಯೆ
ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಆಸಕ್ತರು ಮಾರ್ಚ್ 28ರಂದು ಬೆಳಗ್ಗೆ 8.45ಕ್ಕೆ ಬೋರ್ಡ್ ರೂಂ, ಮೇನ್ ಅಡ್ಮಿನಿಸ್ಟ್ರೇಟಿವ್ ಬಿಲ್ಡಿಂಗ್, ಎನ್.ಐ.ಟಿ.ಕೆ. ಸೂರತ್ಕಲ್, ಕರ್ನಾಟಕ ಇಲ್ಲಿಗೆ ಅಗತ್ಯ ದಾಖಲೆಗಳೊಂದಿಗೆ ಆಗಮಿಸತಕ್ಕದ್ದು.

JOB NOTIFICATION

JOB DESCRIPTION

APPLICATION FORM

OFFICIAL WEBSITE

error: Content is protected !!