ಶಿವಮೊಗ್ಗದಲ್ಲಿ ಮುಂದುವರಿದ ‘ಓಲ್ಡ್ ಮಾಂಕ್’ ಹವಾ, ಶ್ರೀನಿ ಹೇಳಿದ್ದೇನು?

 

 

ಸುದ್ದಿ ಕಣಜ.ಕಾಂ | DISTRICT | ENTERTAINMENT NEWS
ಶಿವಮೊಗ್ಗ: ಪರ ಭಾಷಾ ಸಿನಿಮಾ ಹಾವಳಿಗಳ ನಡುವೆಯೂ ಕನ್ನಡ ಸಿನಿಮಾವೊಂದು ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
ನಗರದ ಭಾರತ್ ಸಿನಿಮಾಸ್ ನಲ್ಲಿ ನಿತ್ಯ ನಾಲ್ಕು ಶೋಗಳು ಯಶಸ್ವಿಯಾಗಿ ನಡೆಯುತ್ತಿದೆ. ವೀಕ್ಷಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದಕ್ಕೆ ಸಿನಿಮಾ ತಂಡ ಕೂಡ ಫುಲ್ ಖುಷ್ ಆಗಿದೆ.

READ | ಓಲ್ಡ್ ಮಾಂಕ್ ರಹಸ್ಯ ಬಿಚ್ಚಿಟ್ಟ ಡೈರೆಕ್ಟರ್ ಶ್ರೀನಿ!

ಶ್ರೀನಿ ಹೇಳಿದ್ದೇನು?
ಸಿನಿಮಾ ಶೂಟಿಂಗ್ ಆರಂಭವಾದಾಗಿನಿಂದಲೇ ಚಿತ್ರದ ನಿರ್ದೇಶಕರೂ ಆದ ಶ್ರೀನಿ ಅವರು ಶಿವಮೊಗ್ಗದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಈಗಲೂ ಶಿವಮೊಗ್ಗದ ಬಗ್ಗೆ ಮೆಚ್ಚುಗೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಕರ್ನಾಟಕದ ನಾನಾ ಕಡೆ ಏಕೆ ರಿಲೀಸ್ ಮಾಡಿಲ್ಲ ಎಂಬ ಅಭಿಮಾನಿಗಳ ಪ್ರಶ್ನೆಗೆ ಉತ್ತರ ನೀಡಿರುವ ಅವರು ರಾಜ್ಯದ ವಿವಿಧೆಡೆ ಥಿಯೇಟರ್ ಸಿಗುವುದು ಕಷ್ಟವಾಗುತ್ತಿದೆ ಎಂದಿದ್ದಾರೆ. ಕನ್ನಡ ಸಿನಿಮಾ ವೀಕ್ಷಿಸಿ, ಗೆಲ್ಲಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದ್ದಾರೆ.

error: Content is protected !!