ಶಿವಮೊಗ್ಗ ನಗರದಲ್ಲಿ ನಿಷೇಧಾಜ್ಞೆ ಸಡಿಲಿಕೆ, ಕೆಲವು ಕಂಡಿಷನ್ ಹೇರಿದ ಜಿಲ್ಲಾಡಳಿತ

 

 

ಸುದ್ದಿ ಕಣಜ.ಕಾಂ | CITY | SECTION 144
ಶಿವಮೊಗ್ಗ: ನಗರದಲ್ಲಿ ಘಟಿಸಿದ ಅಹಿತಕರ ಘಟನೆ ಹಿನ್ನೆಲೆ ನಗರ ವ್ಯಾಪ್ತಿಯಲ್ಲಿ ವಿಧಿಸಿದ್ದ ನಿಷೇಧಾಜ್ಞೆ ಅವಧಿ ಸಡಿಲಿಕೆ ಮಾಡಲಾಗಿದೆ. ಆದರೆ ಮದ್ಯದ ಅಂಗಡಿಗಳನ್ನು ಮಾತ್ರ ಸಂಜೆ 7 ಗಂಟೆಯೊಳಗೆ ಮುಚ್ಚಲು ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಆದೇಶಿಸಿದ್ದಾರೆ.
ಭಜರಂಗ ದಳ ಕಾರ್ಯಕರ್ತ ಹರ್ಷ ಕೊಲೆ ನಂತರ ಕಟ್ಟುನಿಟ್ಟಿನ ವಿಧಿಸಿದ್ದು, ಮಾರ್ಚ್ 4ರ ವರೆಗೆ ನಿಷೇಧಾಜ್ಞೆ ಹೇರಲಾಗಿತ್ತು. ಆದರೆ, ಯಾವುದೇ ಅಹಿತಕರ ಘಟನೆಗಳು ನಡೆಯದೇ ಇರುವುದರಿಂದ ನಿಷೇಧಾಜ್ಞೆ ಸಡಿಲಿಕೆ ಮಾಡಲಾಗಿದೆ.

error: Content is protected !!