ಸಂಪನ್ನಗೊಂಡ ಕೋಟೆ ಶ್ರೀ ಮಾರಿಕಾಂಬ ಜಾತ್ರೆ, ಅಮ್ಮನವರ ದರ್ಶನ ಪಡೆದ ಪ್ರಮುಖರು

 

 

ಸುದ್ದಿ ಕಣಜ.ಕಾಂ | DISTRICT | MARIKAMBA JATRE
ಶಿವಮೊಗ್ಗ: ಕೋಟೆ ಶ್ರೀ ಮಾರಿಕಾಂಬ ಜಾತ್ರೆಯು ಶನಿವಾರ ಸಂಪನ್ನಗೊಂಡಿದೆ. ರಾತ್ರಿ ಅಮ್ಮನವರ ರಾಜಬೀದಿ ಉತ್ಸವವು ಗಾಂಧಿ ಬಜಾರ್ ಮೂಲಕ ಹೊನ್ನಾಳಿ ರಸ್ತೆಯ ಸೇತುವೆಯಿಂದ ಅರಣ್ಯದಲ್ಲಿ ದೇವಿಯ ಮೂರ್ತಿಯನ್ನು ವಿಸರ್ಜಿಸಲಾಗಿದೆ.

READ | ಮಾರಿಕಾಂಬ ಜಾತ್ರೆಯ ಆಕರ್ಷಣೆಗಳೇನು, ಹೇಗಿದೆ ಸಂಭ್ರಮ?

ಪುನೀತರಾದ ಭಕ್ತ ಸಮೂಹ
ಸಾಗರೋಪಾದಿಯಲ್ಲಿ ದೇವಸ್ಥಾನಕ್ಕೆ ಆಗಮಿಸಿದ ಭಕ್ತರು ಮಾರಿಕಾಂಬ ದರ್ಶನ ಪಡೆದರು. ಅಂತಿಮ ದಿನವೂ ಸಾಕಷ್ಟು ಸಂಖ್ಯೆಯಲ್ಲಿ ಸಾರ್ವಜನಿಕರು ಜಾತ್ರೆಗೆ ಸಾಕ್ಷಿಯಾದರು. ಶ್ರೀ ಆನಂದ ಗುರೂಜಿ, ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ ಸೇರಿದಂತೆ ಹಲವು ಗಣ್ಯರು ದೇವಿಯ ದರ್ಶನ ಪಡೆದರು.

error: Content is protected !!