ಸುದ್ದಿ ಕಣಜ.ಕಾಂ | DISTRICT | SPORTS NEWS
ಶಿವಮೊಗ್ಗ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನಗರದ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿರುವ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾ ಸಂಕೀರ್ಣದಲ್ಲಿ 21 ದಿನಗಳ ಈಜು, ಲಾನ್ ಟೆನ್ನಿಸ್ ಹಾಗೂ ಸ್ಕೇಟಿಂಗ್ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ತಿಳಿಸಿದರು.
ನಗರದ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿ ರುವ ಮಾಧ್ಯಮದವರೊಂದಿಗೆ ಮಾತನಾಡಿ, ನಗರದಲ್ಲೇ ಏಕೈಕ ಅಂತರರಾಷ್ಟ್ರೀಯ ಮಟ್ಟದ ಈಜು ಕೊಳ, ಲಾನ್ ಟೆನ್ನಿಸ್ ಮತ್ತು ಸ್ಕೇಟಿಂಗ್ ರಿಂಗ್ ಅಂಕಣಗಳು, ತೆರೆದ ವ್ಯಾಯಾಮ ಶಾಲೆಯನ್ನೊಳಗೊಂಡಿದೆ. ಸುರಕ್ಷಿತವಾಗ ವಾಕಿಂಗ್ ಪಥ ಮತ್ತು ಜಿಮ್ ವ್ಯವಸ್ಥೆ ಇದೆ. ಸಿಂಥೆಟಿಕ್ ಲಾನ್ ಕೆಲಸ ಕೂಡ ಆಗುತ್ತಿದ್ದು ಇನ್ನೊಂದು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದರು.
READ | ಪಶ್ಚಿಮಘಟ್ಟದ ಸೂಕ್ಷ್ಮ ವಿಚಾರಗಳಿಗೆ ದನಿಯಾದ ಶಿವಮೊಗ್ಗ ಸಾಹಿತ್ಯ ಸಮ್ಮೇಳನ, ಡಾ.ಕೆಳದಿ ಗುಂಡಾಜೋಯ್ಸ್ ಹೇಳಿದ್ದೇನು?
ವಿಶೇಷ ಈಜು ಶಿಬಿರ
ನಗರದಲ್ಲಿರುವ ಅಂತರರಾಷ್ಟ್ರೀಯ ಗುಣಮಟ್ಟದ ಏಕೈಕ ಈಜು ಕೊಳ ಇದಾಗಿದ್ದು, ಇಲ್ಲಿ 1ನೇ ಶಿಬಿರವು ಏಪ್ರಿಲ್ 3 ರಿಂದ 26 ರವರೆಗೆ ಹಾಗೂ 2ನೇ ಶಿಬಿರವು ಮೇ 2 ರಿಂದ 26 ರವರೆಗೆ ತಲಾ 21 ದಿನ ವಿಶೇಷ ಈಜು ಶಿಬಿರ ಕೈಗೊಳ್ಳಲಾಗಿದೆ.
50*25 ಅಳತೆಯ 10 ಲೈನ್ಸ್ ಅನ್ನು ಈಜುಕೊಳ ಹೊಂದಿದೆ. ಮಕ್ಕಳು, ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾದ ಸಮಯ ನಿಗದಿಯಾಗಿದೆ. ಮಕ್ಕಳಿಗೆ ಪ್ರತ್ಯೇಕ ಬೇಬಿ ಪೂಲ್ ಸಹ ಇದೆ. ನುರಿತ ಈಜು ತರಬೇತುದಾರರಿಂದ ತರಬೇತಿ ನೀಡಲಾಗುವುದು. 21 ದಿನಗಳ ವಿಶೇಷ ಈಜು ತರಬೇತಿ ಶಿಬಿರವನ್ನು ಹೊರತುಪಡಿಸಿ ಮಾಸಿಕ ತರಬೇತಿ ಶಿಬಿರವನ್ನು ಸಹ ನೀಡಲಾಗುವುದು. ವಾಹನ ಪಾರ್ಕಿಂಗ್, ಪ್ರತ್ಯೇಕ ಸ್ನಾನಗೃಹ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಇದೆ ಎಂದು ಮಾಹಿತಿ ನೀಡಿದರು.
ಲಾನ್ ಟೆನ್ನಿಸ್ ಮತ್ತು ಸ್ಕೇಟಿಂಗ್ ಶಿಬಿರ
ಅಂತರರಾಷ್ಟ್ರೀಯ ಮಟ್ಟದ ಕ್ರೀಡಾ ಸಂಕೀರ್ಣದಲ್ಲಿರುವ ಲಾನ್ ಟೆನ್ನಿಸ್ ಮತ್ತು ಸ್ಕೇಟಿಂಗ್ ರಿಂಗ್ ಅಂಗಣದಲ್ಲಿ ಮಕ್ಕಳು, ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಸಮಯದಲ್ಲಿ ನುರಿತ ತರಬೇತುದಾರರಿಂದ 21 ದಿನಗಳ ವಿಶೇಷ ತರಬೇತಿ ಶಿಬಿರ ನಡೆಸಲಾಗುವುದು. ಇದಲ್ಲದೇ ಮಾಸಿಕ ತರಬೇತಿ ಶಿಬಿರ ಕೂಡ ಸಂಘಟಿಸಲಾಗುವುದು ಎಂದರು.
READ | ಎಸಿಬಿ ಬಲೆಗೆ ಗ್ರೇಡ್ 1 ಹೆಚ್ಚುವರಿ ಪಿಡಿಒ
ಮಾಹಿತಿಗಾಗಿ ಇವರನ್ನು ಸಂಪರ್ಕಿಸಿ
ಈ ಬೇಸಿಗೆ ಶಿಬಿರದಲ್ಲಿ ಸ್ಮಿಮ್ಮಿಂಗ್, ಲಾನ್ ಟೆನ್ನಿಸ್ ಮತ್ತು ಸ್ಕೇಟಿಂಗ್ ಬೆಳಗ್ಗೆ ನಾಲ್ಕು ಹಾಗೂ ಸಂಜೆ ನಾಲ್ಕು ಬ್ಯಾಚ್ಗಳು ನಡೆಯಲಿವೆ. ಪ್ರತಿ ಆಟದ ತರಬೇತಿಗೆ ₹1900 ಶುಲ್ಕ ನಿಗದಿಗೊಳಿಸಲಾಗಿದೆ. ಪ್ರತಿ ಸೋಮವಾರ ರಜೆ ಇದ್ದು, ಶಿಬಿರದ ಪ್ರವೇಶಕ್ಕಾಗಿ ಮೊಬೈಲ್ ಸಂಖ್ಯೆಗಳಾದ 9743820293, (ಈಜು) 7019475379, 9686419812, 9972333179, (ಟೆನ್ನಿಸ್) 7259867739, (ಸ್ಕೇಟಿಂಗ್): 7760921936 ನ್ನು ಸಂಪರ್ಕಿಸಬಹುದೆಂದು ಅವರು ತಿಳಿಸಿದರು.
ಸಾಗರ ಈಜು ಕೊಳದಲ್ಲೂ ತರಬೇತಿ
ಸಾಗರ ನಗರದ ವಿಜಯನಗರ 1ನೇ ತಿರುವಿನಲ್ಲಿ 25*20 ಮೀಟರ್ ಅಳತೆಯ 8 ಲೈನ್ಸ್ ಹೊಂದಿರುವ ವ್ಯವಸ್ಥಿತವಾದ ಈಜುಕೊಳ ನಿರ್ಮಾಣವಾಗಿದ್ದು, ಇಲ್ಲಿಯೂ ಸಹ 21 ದಿನಗಳ ಬೇಸಿಗೆ ಈಜು ತರಬೇತಿ ಶಿಬಿರವನ್ನು ಏಪ್ರಿಲ್ 3 ರಿಂದ ಮೊದಲನೇ ಶಿಬಿರ ಮತ್ತು ಮೇ 2 ರಿಂದ ಎರಡನೇ ಶಿಬಿರವನ್ನು ಆರಂಭಿಸಲಾಗುವುದು. ತರಬೇತಿ ಶುಲ್ಕ ರೂ.1500 ಇದೆ. ಬೇಸಿಗೆ ಶಿಬಿರ ಹೊರತಾಗಿ 15 ವರ್ಷ ಒಳಗಿನವರಿಗೆ 3 ತಿಂಗಳಿಗೆ ₹2,200, ಒಂದು ವರ್ಷಕ್ಕೆ ₹5,500 ಹಾಗೂ 15 ವರ್ಷ ಮೇಲ್ಪಟ್ಟವರಿಗೆ ಮೂರು ತಿಂಗಳಿಗೆ ₹2,500 ಹಾಗೂ ಒಂದು ವರ್ಷಕ್ಕೆ ₹7,700 ನಿಗದಿಪಡಿಸಲಾಗಿದೆ. ಪ್ರವೇಶಕ್ಕಾಗಿ ಮೊ.ಸಂ: 9731233184, 9008982197 ನ್ನು ಸಂಪರ್ಕಿಸಬಹುದು ಎಂದರು.
ಮಾಧ್ಯಮಗೋಷ್ಠಿಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್ ಸ್ವಾಮಿ, ಕ್ರೀಡಾ ಸಂಕೀರ್ಣ ಸಮಿತಿಯ ಸದಸ್ಯ ಗೌತಮ್ ಇದ್ದರು.