5 ದಿನಗಳಿಂದ ಶಿವಮೊಗ್ಗದಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ನಿರಂತರ ಏರಿಕೆ

 

 

ಸುದ್ದಿ ಕಣಜ.ಕಾಂ | DISTRICT | MARKET TREND
ಶಿವಮೊಗ್ಗ: ಕಳೆದ ಐದು ದಿನಗಳಿಂದ ಶಿವಮೊಗ್ಗ (shivamogga) ಜಿಲ್ಲೆಯಲ್ಲಿ ಪೆಟ್ರೋಲ್ (petrol) ಮತ್ತು ಡಿಸೇಲ್  (Diesel) ದರದಲ್ಲಿ ನಿರಂತರ ಏರಿಕೆಯಾಗುತ್ತಿದೆ. 101.43 ರೂಪಾಯಿ ಇದ್ದ ಪೆಟ್ರೋಲ್ ದರದಲ್ಲಿ ಐದೇ ದಿನಗಳಲ್ಲಿ 3.20 ರೂ. ಏರಿಕೆಯಾಗಿದೆ. ಅದೇ ರೀತಿ ಡಿಸೇಲ್ ದರದಲ್ಲಿ 2.97 ರೂ. ಹೆಚ್ಚಳವಾಗಿದೆ. ಇದು ನೇರವಾಗಿ ವ್ಯವಹಾರದ(Business) ಮೇಲೆ ಪರಿಣಾಮ ಬೀರಲಿದೆ.
ಡೀಸೆಲ್ ದರವು ಶುಕ್ರವಾರ ಪ್ರತಿ ಲೀಟರ್ ಗೆ 0.66 ಪೈಸೆ ಏರಿಕೆ ಕಂಡಿದ್ದು, ಪ್ರಸ್ತುತ 104.63 ರೂ. ಇದೆ. ಡಿಸೇಲ್ ಬೆಲೆಯು 0.62 ಪೈಸೆ ಏರಿಕೆಯಾಗಿದ್ದು, ಜಿಲ್ಲೆಯಲ್ಲಿ ಲೀಟರ್ ಗೆ 88.66 ರೂ. ಹೆಚ್ಚಿದೆ. ಏಕಾಏಕಿ ತೈಲ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ಇನ್ನಷ್ಟು ಕಷ್ಟಕ್ಕೆ ಒಳಗಾಗಿದ್ದಾರೆ. ತೈಲ ಬೆಲೆಯು ಮಾರ್ಚ್ 20ರಿಂದ ನಿರಂತರ ಏರಿಕೆಯಾಗುತ್ತಿದೆ.

ದಿನಾಂಕ ಪೆಟ್ರೋಲ್ ದರ ಡಿಸೇಲ್ ದರ
ಮಾರ್ಚ್ 20 101.43 85.69
ಮಾರ್ಚ್ 21 102.23 86.42
ಮಾರ್ಚ್ 22 103.3 87.41
ಮಾರ್ಚ್ 23 103.78 87.87
ಮಾರ್ಚ್ 24 103.97 88.04
ಮಾರ್ಚ್ 25 104.63 88.66

error: Content is protected !!