ಸುದ್ದಿ ಕಣಜ.ಕಾಂ | KARNATAKA | MARKET TREND
ಬೆಂಗಳೂರು: ಕಳೆದ ವಾರದಲ್ಲಿ ಭಾರಿ ಏರಿಳಿತಗಳನ್ನು ಕಂಡಿರುವ ಚಿನ್ನ ಮತ್ತು ಬೆಳ್ಳಿಯ ಬೆಲೆಯು ವಾರಾಂತ್ಯ ಸ್ಥಿರತೆಯನ್ನು ಕಾಪಾಡಿಕೊಂಡಿದೆ. ಭಾನುವಾರ 24 ಕ್ಯಾರೆಟ್ ಚಿನ್ನದ ಬೆಲೆಯು 10 ಗ್ರಾಂಗೆ 51,600 (22 ಕ್ಯಾರೆಟ್ ಗೆ 47,300 ರೂ.) ರೂಪಾಯಿ ನಿಗದಿಯಾಗಿದೆ.
ಈ ವಾರ ಆರಂಭದ ಮೊದಲ ಮೂರು ದಿನಗಳ ಕಾಲ ಹಳದಿ ಲೋಹದ ದರವು ಭಾರಿ ಏರಿಕೆ ಕಂಡಿತ್ತು. ನಂತರ, ನಿಧಾನವಾಗಿ ಇಳಿಕೆ ಮತ್ತು ಏರಿಕೆಯಾಗಿದೆ. ಗುರುವಾರ ಮತ್ತು ಶುಕ್ರವಾರದಂದು ಬಂಗಾರವು ಕ್ರಮವಾಗಿ ಪ್ರತಿ ಗ್ರಾಂಗೆ 160 ರೂಪಾಯಿ, 10 ರೂ. ಇಳಿಕೆಯಾಗಿತ್ತು. ಶನಿವಾರ ಒಂದೇ ದಿನ 24 ಕ್ಯಾರೆಟ್ ಗೆ 170 ರೂ. ಕುಸಿತ ಕಂಡಿತ್ತು. ಇದೇ ದರವು ಭಾನುವಾರ ಸಹ ಮುಂದುವರಿದಿದೆ. ಕಳೆದ ವಾರದ ರೇಟ್ ಕೆಳಗಿನಂತಿದೆ.
ದಿನಾಂಕ | 22 ಕ್ಯಾರೆಟ್ | 24 ಕ್ಯಾರೆಟ್ | ಬೆಳ್ಳಿ(ಕೆಜಿ) |
ಮಾರ್ಚ್ 4 | 47,700 | 52,040 | 72,500 |
ಮಾರ್ಚ್ 5 | 48,400 | 52,800 | 73,400 |
ಮಾರ್ಚ್ 6 | 48,400 | 52,800 | 73,400 |
ಮಾರ್ಚ್ 7 | 49,400 | 53,890 | 75,700 |
ಮಾರ್ಚ್ 8 | 49,400 | 53,890 | 74,600 |
ಮಾರ್ಚ್ 9 | 50,700 | 55,310 | 75,700 |
ಮಾರ್ಚ್ 10 | 48,200 | 52,580 | 74,100 |
ಮಾರ್ಚ್ 11 | 48,200 | 52,580 | 74,600 |
ಮಾರ್ಚ್ 12 | 48,400 | 52,800 | 74,700 |
ಮಾರ್ಚ್ 13 | 48,410 | 52,810 | 74,700 |
ಮಾರ್ಚ್ 14 | 48,100 | 52,470 | 74,700 |
ಮಾರ್ಚ್ 15 | 47,600 | 51,930 | 72,800 |
ಮಾರ್ಚ್ 16 | 47,300 | 51,600 | 72,300 |
ಮಾರ್ಚ್ 17 | 47,450 | 51,760 | 72,900 |
ಮಾರ್ಚ್ 18 | 47,450 | 51,770 | 72,900 |
ಮಾರ್ಚ್ 19 | 47,300 | 51,600 | 72,300 |
ಮಾರ್ಚ್ 20 | 47,300 | 51,600 | 72,300 |