ಸುದ್ದಿ ಕಣಜ.ಕಾಂ | DISTRICT | PENALTY
ಶಿವಮೊಗ್ಗ: ಕಾನೂನು ಮಾಪನಶಾಸ್ತ್ರ ಇಲಾಖೆಯು ಜಿಲ್ಲೆಯಲ್ಲಿ 2021-22ನೇ ಸಾಲಿನ 2021ರ ಏಪ್ರಿಲ್ ನಿಂದ 2022 ರ ಮಾರ್ಚ್ ವರೆಗೆ ಸಾಧಿಸಿರುವ ಪ್ರಗತಿಯ ಮಾಹಿತಿಯನ್ನು ಕಾನೂನು ಮಾಪನಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ಎಸ್.ಮಂಜುನಾಥ್ ನೀಡಿದ್ದಾರೆ.
ತೂಕ, ಅಳತೆ ಸಾಧನಗಳ ಸತ್ಯಾಪನೆ, ಮುದ್ರೆಯಿಂದ ಸಂಗ್ರಹಿಸಿದ ಶುಲ್ಕ ₹1,48,48,873/- ಆಗಿರುತ್ತದೆ. ತಪಾಸಣೆ ಮಾಡಿರುವ ವ್ಯಾಪಾರಸ್ಥರ ಮತ್ತು ಕೈಗಾರಿಕೆಗಳ ಸಂಖ್ಯೆ 2859, ತಪ್ಪಿತಸ್ಥರ ಮೇಲೆ ಹೂಡಿರುವ ಮೊಕದ್ದಮೆಗಳ ಸಂಖ್ಯೆ 1094, ರಾಜಿ ಅಭಿಸಂಧಾನ ಮಾಡಿರುವ ಮೊಕದ್ದಮೆಗಳ ಸಂಖ್ಯೆ 1083 ಮತ್ತು ಮೊಕದ್ದಮೆಗಳನ್ನು ರಾಜಿ ಅಭಿಸಂಧಾನ ಮಾಡಿ ವಿಧಿಸಿದ ದಂಡ ₹20,03,300/- ಆಗಿರುತ್ತದೆ ಎಂದು ತಿಳಿಸಿದ್ದಾರೆ.