ಸುದ್ದಿ ಕಣಜ.ಕಾಂ | DISTRICT | POLITICAL NEWS
ಶಿವಮೊಗ್ಗ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರ ವಿರುದ್ಧ ಅವರ ಸ್ವಕ್ಷೇತ್ರದಲ್ಲೇ ಆಕ್ರೋಶ ಭುಗಿಲೆದ್ದಿದೆ. ಬುಧವಾರ ಶಿವಮೊಗ್ಗ ದಕ್ಷಿಣ ಬ್ಲಾಕ್ ಕೋಟೆ ಠಾಣೆಗೆ ದೂರು ನೀಡಿದರೆ, ಜಿಲ್ಲಾ ಜಾತ್ಯತೀತ ಜನತಾದಳದಿಂದ ಪ್ರತಿಭಟನೆ ಮಾಡಲಾಯಿತು.
READ | ಚಿನ್ನಾಭರಣ ಪ್ರಿಯರಿಗೆ ಶಾಕಿಂಗ್ ನ್ಯೂಸ್, 53 ಸಾವಿರ ಗಡಿದಾಟಿದ ಅಪರಂಜಿಯ ಬೆಲೆ
ನಗರದ ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವಂತಹ ಸಚಿವ ಕೆ.ಎಸ್.ಈಶ್ವರಪ್ಪ ಮೇಲೆ ಎಫ್ಐಆರ್ ದಾಖಲಿಸಿ ಕೂಡಲೇ ಬಂಧಿಸಿ ಕ್ರಮ ವಹಿಸುವಂತೆ ಶಿವಮೊಗ್ಗ ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ಮನವಿ ಪತ್ರದಲ್ಲಿ ಆಗ್ರಹಿಸಿದೆ.
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಕಾರಣರಾಗಿದ್ದಾರೆ ಎನ್ನಲಾದ ಸಚಿವರನ್ನು ಕೂಡಲೇ ಮಂತ್ರಿ ಸ್ಥಾನದಿಂದ ವಜಾಗೊಳಿಸಬೇಕು. ಈಶ್ವರಪ್ಪ ಅವರನ್ನು ಬಂಧಿಸಬೇಕು. ಆತ್ಮಹತ್ಯೆಗೆ ಕಾರಣ ಆಗಿರುವ ಆರೋಪದಡಿ ಕೆ.ಎಸ್.ಈಶ್ವರಪ್ಪ ಅವರ ಮೇಲೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಶಿವಮೊಗ್ಗ ನಗರ ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ವಿನಯ್ ತಾಂದ್ಲೆ, ಕೆಪಿಸಿಸಿ ಕಾರ್ಯದರ್ಶಿ ದೇವೇಂದ್ರಪ್ಪ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸತೀಶ್, ಎನ್.ಎಸ್ಯು.ಐ ರಾಜ್ಯ ಕಾರ್ಯದರ್ಶಿ ಬಾಲಾಜಿ, ಜಿಲ್ಲಾ ಕಿಸಾನ್ ಸೆಲ್ ನ ಕಾರ್ಯಾಧ್ಯಕ್ಷ ಗಿರೀಶ್, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಚಿರಂಜೀವಿ ಬಾಬು, ಕಾರ್ಮಿಕ ಅಧ್ಯಕ್ಷ ಪ್ರಮೋದ್, ಯುವ ಮುಖಂಡರಾದ ಶರತ್ ಮರಿಯಪ್ಪ, ಶ್ರೀಧರ್, ವಿನೋದ್, ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರುಣಾ, ಪುರಲೆ ಮಂಜು ಭಾಗವಹಿಸಿದ್ದರು.
READ | ಎನ್.ಎಸ್.ಯು.ಐನಿಂದ ಪಂಜಿನ ಮೆರವಣಿಗೆ, ಡಿಮ್ಯಾಂಡ್ಗಳೇನು?
ನ್ಯಾಯಾಧೀಶರಿಂದ ಪ್ರಕರಣದ ತನಿಖೆ ನಡೆಸಿ
ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಆತ್ಮಹತ್ಯೆ ಪ್ರಕರಣ ಸಂಬಂಧ ಕೂಡಲೇ ಕೆ.ಎಸ್.ಈಶ್ವರಪ್ಪ ಅವರನ್ನು ಸಂಪುಟದಿಂದ ಕೈಬಿಡಬೇಕು. ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಹಾಗೂ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಿಂದ ಸೂಕ್ತ ತನಿಖೆ ನಡೆಸಬೇಕು ಎಂದು ಜಿಲ್ಲಾ ಜಾತ್ಯತೀತ ಜನತಾ ದಳ ಆಗ್ರಹಿಸಿದೆ.
ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಮನವಿ ಪತ್ರ ಸಲ್ಲಿಸಿದೆ. ಪ್ರಮುಖರಾದ ರಾಮಕೃಷ್ಣ, ಕಾಂತಾರಾಜ್, ನರಸಿಂಹ, ಮಂಜುನಾಥ್, ಶಾಂತ ಸುರೇಂದ್ರ ಹಲವರು ಪಾಲ್ಗೊಂಡಿದ್ದರು.