ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಫೆಬ್ರವರಿ 28ರಂದು ನಗರದ ಪಂಚವಟಿ ಕಾಲೋನಿಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ 65-70 ವರ್ಷ ವಯಸ್ಸಿನ ದೇವಮ್ಮ ಎಂಬ ಅಪರಿಚಿತ ಮಹಿಳೆಯನ್ನು ಸಾರ್ವಜನಿಕರು ಆಂಬ್ಯುಲೆನ್ಸ್ ಮೂಲಕ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು, ಏಪ್ರಿಲ್ 11ರಂದು ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿರುತ್ತಾರೆ. ಈ ಮಹಿಳೆಗೆ ವಾರಸ್ಸುದಾರರಿಲ್ಲದೇ ವಿಳಾಸ ತಿಳಿದಿರುವುದಿಲ್ಲ.
READ | ಶಿವಮೊಗ್ಗದಿಂದ ಕಿಸಾನ್ ರೈಲು ಸಂಚಾರ
ಮೃತ ಮಹಿಳೆ ಸುಮಾರು 5.5 ಅಡಿ ಉದ್ದ, ಕಪ್ಪು ಮೈಬಣ್ಣ, ಕೋಲು ಮುಖ ಮತ್ತು ತೆಳುವಾದ ಮೈಕಟ್ಟು ಹೊಂದಿದ್ದು ಮೃತರ ತಲೆಯಲ್ಲಿ ಸುಮಾರು 6 ಇಂಚು ಉದ್ದದ ಬಿಳಿ ಕೂದಲು ಹೊಂದಿರುತ್ತಾರೆ. ಈ ಮಹಿಳೆಯ ವಾರಸುದಾರರು ಅಥವಾ ಸಂಬಂಧಿಕರು ಇದ್ದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.