‘ರೇಡಿಯೋ ಶಿವಮೊಗ್ಗ‌’ ಆರಂಭಕ್ಕೆ ಅಧಿಕೃತ ದಿನಾಂಕ ಫಿಕ್ಸ್, ಯಾವೆಲ್ಲ‌ ಕಾರ್ಯಕ್ರಮ ಪ್ರಸಾರವಾಗಲಿವೆ, ಫ್ರಿಕ್ವೆನ್ಸಿ ಎಷ್ಟು?

ಸುದ್ದಿ ಕಣಜ.ಕಾಂ | DISTRICT | SHIVAMOGGA RADIO
ಶಿವಮೊಗ್ಗ: ಈಗಾಗಲೇ‌ ಕಾರ್ಯಾರಂಭಿಸಿರುವ ರೇಡಿಯೋ ಶಿವಮೊಗ್ಗ ಸಮುದಾಯ ಬಾನುಲಿ ಕೇಂದ್ರ ಅಧಿಕೃತವಾಗಿ ಏಪ್ರಿಲ್ 22ರಿಂದ ಪ್ರಸಾರ‌ ಆರಂಭಿಸಲಿದೆ‌ ಎಂದು ನಿರ್ದೇಶಕ ಜಿ.ಎಲ್. ಜನಾರ್ಧನ ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಕೊಡಚಾದ್ರಿ ಸಮಗ್ರ ಅಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಈಗಾಗಲೇ ಪ್ರಾಯೋಗಿಕವಾಗಿ ಶಿವಮೊಗ್ಗದಲ್ಲಿ ಮಾರ್ಚ್ ತಿಂಗಳಿನಿಂದಲೇ ಎಫ್.ಎಂ. ಕೇಂದ್ರ ಪ್ರಸಾರವಾಗುತ್ತಿದೆ. ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಿದೆ ಎಂದರು.

READ | 48 ಟನ್ ಗುಜುರಿ ಸಾಮಗ್ರಿಗೆ ನಯಾಪೈಸೆ ನೀಡದೇ ವಂಚಿಸಿದ ವ್ಯಕ್ತಿ ವಿರುದ್ಧ ಎಫ್‍ಐಆರ್

ಶಿವಮೊಗ್ಗ ರೇಡಿಯೋ ವಿಶೇಷ ತರಂಗಾಂತರಗಳ ಮೂಲಕ, ಆನ್ಲೈನ್ ನಲ್ಲಿ ಮತ್ತು ನೇರವಾಗಿ ಪ್ರಸಾರವಾಗಲಿದೆ. ಆನ್ ಲೈನ್ ಮೂಲಕವಾದರೆ ವಿಶ್ವದ ಯಾವುದೇ ಭಾಗದಿಂದ ಕೇಳಬಹುದು. ನೇರವಾಗಿ ಸುಮಾರು 30 ಕಿ.ಮೀ. ವ್ಯಾಪ್ತಿಯಲ್ಲಿ ಇದರ ಪ್ರಸಾರವಾಗಲಿದೆ. ರೇಡಿಯೋ ಶಿವಮೊಗ್ಗ ಎಫ್.ಎಂ. ಆ್ಯಪ್  ಅನ್ನು ಡೌನ್ ಲೋಡ್ ಮಾಡಿಕೊಂಡು ಕೇಳಬೇಕು ಎಂದು ತಿಳಿಸಿದರು.
ಯಾವ್ಯಾವ ಕಾರ್ಯಕ್ರಮಗಳ ಪ್ರಸಾರ?
ಸಮಗ್ರ ಶಿಕ್ಷಣ, ಸಾಂಸ್ಕೃತಿಕ ವೈಭವ, ಜಾನಪದ, ಸಂಗೀತ, ಕ್ರೀಡೆ, ಕೃಷಿ, ವಾಣಿಜ್ಯ, ಉದ್ಯೋಗ, ಕುಶಲಕಲೆ, ಕೈಗಾರಿಕೆ, ಶಿಕ್ಷಣ, ಪರಿಸರ ಮುಂತಾದ ವಿಶಿಷ್ಟ ವಿಷಯಗಳು ಪ್ರಸಾರವಾಗಲಿವೆ. ಜೊತೆಗೆ, ಹೊಸ ಪ್ರತಿಭೆಗಳಿಗೆ ಸ್ಫೂರ್ತಿ ನೀಡಲಿದೆ.
ಪ್ರಸಾರಾರಂಭದ ದಿನ ಆಸಕ್ತರು ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ಕೇಂದ್ರದ ನಂಬರ್ 7259176279ಗೆ ವ್ಯಾಟ್ಸಾಪ್ ಮೂಲಕ ರೆಕಾರ್ಡ್ ಮಾಡಿದ ಸಂದೇಶವನ್ನು ಕಳುಹಿಸಬಹುದಾಗಿದೆ. ರೇಡಿಯೋ ಕೇಂದ್ರಕ್ಕೂ ಬಂದು ಶುಭ ಕೋರಬಹುದು.
ಮಾಧ್ಯಮಗೋಷ್ಠಿಯಲ್ಲಿ ಪ್ರಮುಖರಾದ ಪ್ರೊ.ಎ.ಎಸ್.ಚಂದ್ರಶೇಖರ್, ಡಾ. ಹೂವಯ್ಯಗೌಡ, ಬಿ. ಗುರುಪ್ರಸಾದ್, ನಿವೃತ್ತ ತಹಸೀಲ್ದಾರ್ ಸಿ.ಎಸ್. ಚಂದ್ರಶೇಖರ್ ಉಪಸ್ಥಿತರಿದ್ದರು.

READ | ಕರ್ತವ್ಯ ಪ್ರಜ್ಞೆ ಮೆರೆದ ಶಿವಮೊಗ್ಗ ರೈಲ್ವೆ ಪೊಲೀಸ್