ಶಿವಮೊಗ್ಗ ಪ್ರತಿಭೆ ಕೆವಿನ್‍ಗೆ ಸ್ಕೇಟಿಂಗ್‍ನಲ್ಲಿ ಚಿನ್ನದ ಪದಕ

ಸುದ್ದಿ ಕಣಜ.ಕಾಂ | DISTRICT | TALENT JUNCTION 
ಶಿವಮೊಗ್ಗ: ಕೇಂದ್ರೀಯ ವಿದ್ಯಾಲಯದ ಮೂರನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ಕೆವಿನ್ ಜೆ.ಹೊನ್ನಳ್ಳಿ ರಾಷ್ಟ್ರಮಟ್ಟದಲ್ಲಿ ಸಆಧನೆ ಮಾಡಿದ್ದಾರೆ ಎಂದು ಕೇಂದ್ರೀಯ ವಿದ್ಯಾಲಯದ ಪ್ರಾಚಾರ್ಯರು ತಿಳಿಸಿದ್ದಾರೆ.

READ | ‘ರೇಡಿಯೋ ಶಿವಮೊಗ್ಗ‌’ ಆರಂಭಕ್ಕೆ ಅಧಿಕೃತ ದಿನಾಂಕ ಫಿಕ್ಸ್, ಯಾವೆಲ್ಲ‌ ಕಾರ್ಯಕ್ರಮ ಪ್ರಸಾರವಾಗಲಿವೆ, ಫ್ರಿಕ್ವೆನ್ಸಿ ಎಷ್ಟು?

ಜೋಸೆಫ್ ಆರ್.ಹೊನ್ನಳ್ಳಿ ಮತ್ತು ಮಂಜುಳ ಜೋಸೆಫ್ ಅವರ ಪುತ್ರನಾದ ಕೆವಿನ್ ಪಂಜಾಬ್ ರಾಜ್ಯದ ಮೊಹಾಲಿಯಲ್ಲಿ ಏ.21 ರಿಂದ 24ರ ವರೆಗೆ ನಡೆದ ರಾಷ್ಟ್ರಮಟ್ಟದ ಕ್ವಾಡ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ನಲ್ಲಿ ರಿಂಕ್ 1 (200 ಮೀ)ರಲ್ಲಿ ಬಂಗಾರದ ಪದಕ, ರಿಂಕ್ 2(500 ಮೀ) ರಲ್ಲಿ ಬೆಳ್ಳಿ ಪದಕ ಮತ್ತು ರಿಂಕ್ 3(1000 ಮೀ) ರಲ್ಲಿ ಕಂಚಿನ ಪದಕ ಗಳಿಸಿ ಶಾಲೆಗೆ ಕೀರ್ತಿ ತಂದಿರುತ್ತಾರೆ.