ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ನಗರದ ಬಿ.ಎಚ್.ರಸ್ತೆಯಲ್ಲಿ ವ್ಯಕ್ತಿಯೊಬ್ಬರ ತಲೆಗೆ ಇಟ್ಟಿಗೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.
ತುಂಗಾನಗರ ನಿವಾಸಿ ಚಂದ್ರಶೇಖರ್ (30) ಕೊಲೆಯಾದಾತ. ರಾಜೀವ್ ಗಾಂಧಿ ಬಡಾವಣೆಯ ಪರಶುರಾಮ್ ಎಂಬಾತ ಕೊಲೆ ಮಾಡಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.
ಮಾಲ್ ನಿಂದ ಬಸ್ ನಿಲ್ದಾಣದ ಕಡೆಗೆ ಹೋಗಿದ್ದ ಚಂದ್ರಶೇಖರ್
ಚಂದ್ರಶೇಖರ್ ಅವರು ಶುಕ್ರವಾರ ರಾತ್ರಿ ತನ್ನ ಭಾವ ನರಸಿಂಹಲು ಅವರೊಂದಿಗೆ ಶಿವಮೊಗ್ಗದ ಶಿವಪ್ಪನಾಯಕ ಮಾಲ್ ಗೆ ಹೋಗಿದ್ದು, ತಡ ರಾತ್ರಿ ನರಸಿಂಹಲು ಒಬ್ಬರೇ ಮನೆಗೆ ಹಿಂದಿರುಗಿದ್ದಾರೆ. ಆಗ ಚಂದ್ರಶೇಖರ್ ಅವರು ಬಸ್ ನಿಲ್ದಾಣಗೆ ಹೋಗಿದ್ದಾರೆ. ಅಲ್ಲಿ ಬೇರೊಬ್ಬ ವ್ಯಕ್ತಿಯೊಂದಿಗೆ ಗಲಾಟೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹಳೇ ವೈಷಮ್ಯ ಹಿನ್ನೆಲೆ ಕೊಲೆ
ಹಳೇ ವೈಷಮ್ಯದ ಹಿನ್ನೆಲೆ ಬಿ.ಎಚ್.ರಸ್ತೆಯ ಪಿಂಗಾರ್ ಬಾರ್ ಎದುರುಗಡೆ ಇಟ್ಟಿಗೆಯಿಂದ ಹೊಡೆದು ಕೊಲೆ ಮಾಡಲಾಗಿದೆ. ಈ ವೇಳೆ ಚಂದ್ರಶೇಖರ್ ಅವರ ಸ್ನೇಹಿತ ಸತೀಶ್ ಕೂಡ ಅವರೊಂದಿಗಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 302 ರೀತ್ಯಾ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.