ಇಂದಿನಿಂದ 3 ದಿನ ಶಿವಮೊಗ್ಗದಲ್ಲಿ ನಡೆಯಲಿದೆ ಗೋವಾ ಫ್ರ್ರೆಂಡ್ಸ್ ಕ್ರಿಕೆಟ್ ಲೀಗ್, ಏನಿದರ ಉದ್ದೇಶ?

 

 

ಸುದ್ದಿ ಕಣಜ.ಕಾಂ | KARNATAKA | SPORTS NEWS
ಶಿವಮೊಗ್ಗ: ನಗರದ ಕೆ.ಎಸ್.ಸಿ.ಎ ಸ್ಟೇಡಿಯಂನಲ್ಲಿ ಏಪ್ರಿಲ್ 8, 9 ಮತ್ತು 10ರಂದು ಗೋವಾ ಫ್ರ್ರೆಂಡ್ಸ್ ಕ್ರಿಕೆಟ್ ಲೀಗ್ (goa friends cricket league) ನಡೆಯಲಿದೆ ಎಂದು ಕೆ.ಎಸ್.ಸಿ.ಎ ವಲಯ ಸಂಚಾಲಕರೂ ಆದ ಎಂ.ಎಲ್.ಸಿ ಡಿ.ಎಸ್.ಅರುಣ್ ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಕ್ರೀಡಾ ಪ್ರವಾಸೋದ್ಯಮವನ್ನು ಹೆಚ್ಚು ಮಾಡುವ ಸಲುವಾಗಿ ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡಲಾಗುತ್ತಿದೆ. ಈಗಾಗಲೇ ಗೋವಾದಿಂದ ತಂಡ ಬಂದಿದೆ ಎಂದರು.

ಈ ಪಂದ್ಯಾವಳಿಯು ಟ್ಯಾಲೆಂಟ್ ಗಳನ್ನು ಗುರುತಿಸಿ ಅಂತರರಾಜ್ಯಮಟ್ಟದಲ್ಲಿ ಬೆಳೆಸಲು ಸಹಕಾರಿಯಾಗಲಿದೆ. ಈ ಪಂದ್ಯಾವಳಿ ಗೋವಾ, ಡೆಹರಾಡೂನ್, ದುಬೈಗಳಲ್ಲಿ ಆಯೋಜಿಸಲಾಗಿತ್ತು. ಈ ಬಾರಿ ಶಿವಮೊಗ್ಗದಲ್ಲಿ ನಡೆಯುತ್ತಿದೆ.
– ಚಿರಾಗ್ ನಾಯಕ್, ಫ್ರೆಂಡ್ಸ್ ಕ್ರಿಕೆಟ್ ಲೀಗ್

ಶಿವಮೊಗ್ಗದಲ್ಲಿರುವ ಕೆ.ಎಸ್.ಸಿ.ಎ ಗ್ರೌಂಡ್ ಗೆ ಬೆಸ್ಟ್ ಗ್ರೌಂಡ್ ಬಿರುದು ಬಿಸಿಸಿಐನಿಂದ ಲಭಿಸಿದ್ದು, ಶಿವಮೊಗ್ಗ ವಲಯದಿಂದ ಅತೀ ಹೆಚ್ಚು ಕ್ರಿಕೆಟ್ ಪ್ರತಿಭೆಗಳನ್ನು ಹೊರ ತರುವ ಗುರಿ ಹೊಂದಲಾಗಿದೆ ಎಂದರು.

ಶಿವಮೊಗ್ಗದಲ್ಲಿ 4 ಟರ್ಫ್ ಪಿಚ್ ಗಳಿದ್ದು, ಭದ್ರಾವತಿಯಲ್ಲೂ ಒಂದಿದೆ. ವಲಯಕ್ಕೆ ಸೇರಿರುವ ಹಾಸನದಲ್ಲಿ ಈಗ ಹೂಡಾ ಜಾಗವನ್ನು ಕೆ.ಎಸ್.ಸಿಎಗೆ ನೀಡಿದೆ. ಅಲ್ಲಿಯೂ ಪಿಚ್ ಸಿದ್ಧಪಡಿಸಲಾಗಿದ್ದು, 13ರಂದು ಉದ್ಘಾಟನೆ ಮಾಡಲಾಗುವುದು. ಚಿಕ್ಕಮಗಳೂರಿನಲ್ಲೂ ಜಾಗವನ್ನು ಗುರುತಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಪ್ರಮುಖರಾದ ಶ್ರೀರಾಮ, ಯಶವಂತಕುಮಾರ್ ನಾಯಕ್ ಉಪಸ್ಥಿತರಿದ್ದರು.

error: Content is protected !!