ಶಿವಮೊಗ್ಗ ಡಿಸಿಸಿ ಬ್ಯಾಂಕ್‍ನಲ್ಲಿ ವಿವಿಧ ಹುದ್ದೆಗಳ ನೇಮಕಾತಿ, ಪೂರ್ಣ ಅಧಿಸೂಚನೆಗಾಗಿ ಓದಿ

 

 

ಸುದ್ದಿ ಕಣಜ.ಕಾಂ | DISTRICT | JOB JUNCTION
ಶಿವಮೊಗ್ಗ:  Shivamogga DCC Bank Recruitment Notification -2022 ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಲಿಮಿಟೆಡ್ (ಡಿಸಿಸಿ)ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹರು ಮೇ 16ರೊಳಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.

ನೇಮಕಾತಿ ಸಂಸ್ಥೆ ಶಿವಮೊಗ್ಗ ಡಿಸಿಸಿ ಬ್ಯಾಂಕ್
ಹುದ್ದೆಗಳ ಸಂಖ್ಯೆ 98
ಉದ್ಯೋಗ ಸ್ಥಳ ಶಿವಮೊಗ್ಗ
ಹುದ್ದೆ ಹೆಸರು ಕ್ಲರ್ಕ್, ಅಟೆಂಡರ್, ಚಾಲಕ
ವೇತನ ಶ್ರೇಣಿ 17,000ರಿಂದ 62,600 ರೂಪಾಯಿ

ಒಟ್ಟು 98 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಕ್ಲರ್ಕ್, ಅಟೆಂಡರ್ ಮತ್ತು ಚಾಲಕ ಹುದ್ದೆಗಳ ನೇಮಕಾತಿ ಮಾಡಲಾಗುವುದು. ಖಾಸಗಿ ಸಹಾಯಕ, ಸ್ಟೆನೋಗ್ರಾಫರ್, ಜೂನಿಯರ್ ಅಸಿಸ್ಟೆಂಟ್, ಫೀಲ್ಡ್ ವರ್ಕರ್, ನಗದು ಗುಮಾಸ್ತ ಹುದ್ದೆಗೆ ಪದವಿ ತೇರ್ಗಡೆಯಾಗಿರಬೇಕು. ವಾಹನ ಚಾಲಕರು, ಅಟೆಂಡರ್ ಹುದ್ದೆಗೆ ಎಸ್ಸೆಸ್ಸೆಲ್ಸಿ, ಅಕ್ವರಿಸ್ಟ್ 4ನೇ ತರಗತಿ ಪಾಸ್ ಆಗಿರಬೇಕು. 

JOBS FB Link

ಹುದ್ದೆ ಹೆಸರು ಹುದ್ದೆ ಸಂಖ್ಯೆ
ಖಾಸಗಿ ಸಹಾಯಕ, ಸ್ಟೆನೋಗ್ರಾಫರ್ 1
ಜೂನಿಯರ್ ಅಸಿಸ್ಟೆಂಟ್, ಫೀಲ್ಡ್ ವರ್ಕರ್, ನಗದು ಗುಮಾಸ್ತರು 73
ವಾಹನ ಚಾಲಕರು 1
ಅಟೆಂಡರ್ 22
ಅಕ್ವರಿಸ್ಟ್ 1
ಒಟ್ಟು 98

ವಯೋಮಿತಿ
ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್ಸಿ, ಎಸ್ಟಿ, ಪ್ರವರ್ಗ 1ಕ್ಕೆ 5 ವರ್ಷ ಹಾಗೂ ವಿಧವೆ ಅಭ್ಯರ್ಥಿಗಳಿಗೆ 10 ವರ್ಷ ಸಡಿಲಿಕೆ ನೀಡಲಾಗಿದೆ. ಎಸ್ಸಿ, ಎಸ್ಟಿ, ಪ್ರವರ್ಗ 1 ಮತ್ತು ಮಾಜಿ ಸೈನಿಕರಿಗೆ 450 ರೂಪಾಯಿ ಮತ್ತು ಪ್ರವರ್ಗ 2ಎ, 3ಎ, 3ಬಿ ಅಭ್ಯರ್ಥಿಗಳಿಗೆ 900 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಶುಲ್ಕವನ್ನು ಡಿಡಿ ಮೂಲಕವೇ ಪಾವತಿಸಬೇಕು.

READ | ಎಸ್ಸೆಸ್ಸೆಲ್ಸಿ, ಸ್ನಾತಕೋತ್ತರ ಪಾಸ್ ಆದವರಿಗೆ ನಿಮ್ಹಾನ್ಸ್ ನಲ್ಲಿ ಉದ್ಯೋಗ

ಅರ್ಜಿ ಸಲ್ಲಿಕೆ ವಿಧಾನ
ನಿಗದಿತ ಅರ್ಜಿ ನಮೂನೆಯಲ್ಲಿ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ. ಸ್ವಯಂ ದೃಢೀಕರಿಸಿದ ದಾಖಲೆಗಳೊಂದಿಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಸಿಬ್ಬಂದಿ ನಿಯಂತ್ರಣ ಸಮಿತಿ, ಶಿವಮೊಗ್ಗ ಸಹಕಾರ ಕೇಂದ್ರ ಬ್ಯಾಂಕ್ ಲಿಮಿಟೆಡ್, ಬಾಲರಾಜ್ ಅರಸ್ ರಸ್ತೆ, ಪಿ.ಬಿ.ಸಂಖ್ಯೆ 62, ಶಿವಮೊಗ್ಗ 577201ಗೆ ಕಳುಹಿಸಲು ಸೂಚಿಸಲಾಗಿದೆ.
ಪ್ರಮುಖ ದಿನಾಂಕಗಳು
ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಆರಂಭದ ದಿನಾಂಕ 22/04/2022
ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16/05/2022
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ 16/05/2022

JOB NOTIFICATION 

WEBSITE

error: Content is protected !!