ಶಿವಮೊಗ್ಗದ ಈ ಶಾಲೆಯಲ್ಲಿ 1 ರೂಪಾಯಿಯಲ್ಲಿ ಎಸ್ಸೆಸ್ಸೆಲ್ಸಿ ಶಿಕ್ಷಣ, ಕಡಿಮೆ ಅಂಕ ಪಡೆದರೂ ಅಡ್ಮಿಷನ್

 

 

ಸುದ್ದಿ ಕಣಜ.ಕಾಂ | DISTRICT | EDUCATION CORNER
ಶಿವಮೊಗ್ಗ: ಗುರುಪುರದಲ್ಲಿರುವ ಡೆಲ್ಲಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಶಿಕ್ಷಣವನ್ನು ಕೇವಲ 1 ರೂಪಾಯಿಗೆ ನೀಡಲಾಗುತ್ತಿದೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಶಾಲೆಯ ಫೌಂಡರ್ ಡೈರೆಕ್ಟರ್ ಎಸ್.ಬಿ. ಜಗದೀಶ್ ಗೌಡ, 2013ರಲ್ಲಿ ಆರಂಭವಾಗಿರುವ ಶಾಲೆಯಲ್ಲಿ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ಮಕ್ಕಳಿಗೆ ಎಸ್‍ಎಸ್‍ಎಲ್‍ಸಿ ಶಿಕ್ಷಣವನ್ನು ಕೇವಲ ಒಂದು ರೂಪಾಯಿಗೆ ನೀಡಲಾಗುತ್ತಿದೆ. ಅರ್ಹ ಮತ್ತು ಅಗತ್ಯವಿರುವವರು ಸದುಪಯೋಗ ಹೊಂದಬೇಕು ಎಂದು ತಿಳಿಸಿದರು.

READ | ಇಂದಿನಿಂದ 3 ದಿನ ಶಿವಮೊಗ್ಗದಲ್ಲಿ ನಡೆಯಲಿದೆ ಗೋವಾ ಫ್ರೆಂಡ್ಸ್ ಕ್ರಿಕೆಟ್ ಲೀಗ್, ಏನಿದರ ಉದ್ದೇಶ?

ಶೇ.40ರಷ್ಟು ಅಂಕ ಪಡೆದವರಿಗೂ ಪ್ರವೇಶ
ಈ ಶಾಲೆಯಲ್ಲಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳು ಉತ್ತಮ ದರ್ಜೆಯಲ್ಲಿ ಪಾಸಾಗಿದ್ದಾರೆ. ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನಿಡಲಾಗುತ್ತಿದೆ. ಜೊತೆಗೆ, ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ಕೇವಲ 1 ರೂಪಾಯಿ ಪಡೆಯಲಾಗುತ್ತಿದೆ ಎಂದು ಹೇಳಿದರು.
ಕಲಿಕೆಯಲ್ಲಿ ಹಿಂದುಳಿದ ಶೇ.40ರಷ್ಟು ಅಂಕ ಪಡೆದ ಮಕ್ಕಳಿಗೂ ಶಾಲೆ ಪ್ರವೇಶ ನೀಡಿ ಅವರನ್ನು ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸುವಂತೆ ಸಿದ್ಧಪಡಿಸುತ್ತಿದೆ ಎಂದರು.
ಮಾಹಿತಿಗಾಗಿ ಕೂಡಲೆ ಕರೆ ಮಾಡಿ
ಶಾಲೆಯಲ್ಲಿ ಈಗ ಪ್ಲೇಗ್ರೂಪ್ ನಿಂದ 9 ನೇ ತರಗತಿಗಳಿಗೆ (ಸಿ.ಬಿ.ಎಸ್.ಇ.) ಪ್ರವೇಶ ಆರಂಭಗೊಂಡಿದೆ. ಎಸ್ಸೆಸ್ಸೆಲ್ಸಿ ದಾಖಲಾತಿಯೂ ಆರಂಭಗೊಂಡಿದೆ. ಆಸಕ್ತರು ಹೆಸರು ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗಾಗಿ 9448220170, 8105360578 ಸಂಪರ್ಕಿಸುವಂತೆ ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಶಿಕ್ಷಕರಾದ ಅನಿತಾ ಸುರೇಶ್, ಎಸ್.ಪಿ.ಶಶಿಕುಮಾರ್, ಜಗದೀಶ್, ಸವಿತಾ, ಪ್ರತಾಪ್ ಉಪಸ್ಥಿತರಿದ್ದರು.

READ C| ಐಟಿಐ, ಡಿಪ್ಲೋಮಾ, ಎಂಜಿನಿಯರಿಂಗ್ ಪಾಸ್ ಆದವರಿಗೆ ECIL ನಲ್ಲಿ ಉದ್ಯೋಗ, ನಡೆಯಲಿದೆ ಸಂದರ್ಶನ

error: Content is protected !!