ಕುವೆಂಪು ವಿವಿಗೆ ನುಗ್ಗಿದ 2 ಕಾಡಾನೆ, ಆತಂಕದಲ್ಲಿ ವಿದ್ಯಾರ್ಥಿಗಳು, ಸಿಬ್ಬಂದಿ, ಮಹತ್ವದ ಸೂಚನೆ

 

 

ಸುದ್ದಿ ಕಣಜ.ಕಾಂ | DISTRICT | KUVEMPU UNIVERSITY
ಶಿವಮೊಗ್ಗ: ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದ ಜ್ಞಾನ ಸಹ್ಯಾದ್ರಿ ಆವರಣದಲ್ಲಿ ಎರಡು ಆನೆಗಳು ಕಾಣಿಸಿಕೊಂಡಿದ್ದು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದ ಆತಂಕಕ್ಕೆ ಕಾರಣವಾಗಿದೆ.

CLICK ON LINK FOR VIDEO REPORT

READ | ಕೂಡ್ಲಿ ಶ್ರೀ ಸಂಗಮೇಶ್ವರ ಜಾತ್ರೆ, ತುಂಗ ಭದ್ರಾದಲ್ಲಿ ಪುಣ್ಯ ಸ್ನಾನ ಮಾಡಿ ಪುನಿತರಾದ ಭಕ್ತರು

ಸಂಜೆ ಆರು ಗಂಟೆ ವೇಳೆಗೆ ಸಿಬ್ಬಂದಿ ಕ್ವಾರ್ಟರ್ಸ್ ಬಳಿ ಕಾಣಿಸಿಕೊಂಡ ಆನೆಗಳು ಸಂಜೆ 7.30ರ ಹೊತ್ತಿಗೆ ಕುವೆಂಪು ಪ್ರತಿಮೆ, ಗ್ರಂಥಾಲಯದ ಮುಂದೆ ನಡೆದಾಡಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸೆಕ್ಯೂರಿಟಿ‌ ಸಿಬ್ಬಂದಿ‌ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಗಳಿಂದ ಹೊರಬರದಂತೆ ಸೂಚನೆ ನೀಡಿದ್ದು, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಧಾವಿಸಲಿದ್ದಾರೆ ಎಂದು ವಿವಿ ಮೂಲಗಳಿಂದ ತಿಳಿದುಬಂದಿದೆ.

error: Content is protected !!