ಶಿವಮೊಗ್ಗದಲ್ಲಿ‌ ನಡೆಯಲಿದೆ ಬಿಜೆಪಿ ಪ್ರಕೋಷ್ಠದ ಜಿಲ್ಲಾ ಸಮಾವೇಶ

ಸುದ್ದಿ ಕಣಜ.ಕಾಂ | DISTRICT | POLITICAL NEWS
ಶಿವಮೊಗ್ಗ: ನಗರದ ಶುಭಶ್ರೀ ಸಮುದಾಯ ಭವನದಲ್ಲಿ ಮೇ 15ರಂದು ಪ್ರಕೋಷ್ಠದ ಜಿಲ್ಲಾ ಸಮಾವೇಶ ಆಯೋಜಿಸಲಾಗಿದೆ ಎಂದು ಬಿಜೆಪಿ ಪ್ರಕೋಷ್ಠಗಳ ರಾಜ್ಯ ಸಂಚಾಲಕ ಎಂ.ಬಿ.ಭಾನುಪ್ರಕಾಶ್ ಹೇಳಿದರು.
ಬುಧವಾರ ಬಿಜೆಪಿ ಕಚೇರಿಯಲ್ಲಿ ಕರೆದಿದ್ದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿ, ಚುನಾವಣೆ ‌ಹಿನ್ನೆಲೆ ಜಿಲ್ಲೆಯಲ್ಲಿ ನಡೆಯಲಿರುವ ಸಮಾವೇಶದಲ್ಲಿ ಶಾಸಕರು, ಸಚಿವರು‌‌,‌ ಸಂಸದರು ಸೇರಿದಂತೆ ಪಕ್ಷದ ಪ್ರಮುಖರು ಭಾಗವಹಿಸಲಿದ್ದಾರೆ ಎಂದರು.

READ | ರಾಜ್ಯ ರಾಜಕಾರಣ‌‌ ಬದಲಾವಣೆಯ ಬಗ್ಗೆ ಮಾಜಿ‌ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದೇನು?

ತುಮಕೂರಿನ ಮೊದಲನೇ ಸಮಾವೇಶಕ್ಕೆ ಚಾಲನೆ
ಪ್ರಕೋಷ್ಠದ ಮೊದಲ ಸಮಾವೇಶ ತುಮಕೂರಿನಲ್ಲಿ ಮೇ 7ರಂದು ನಡೆಯಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಉದ್ಘಾಟನೆ ಮಾಡಲಿದ್ದಾರೆ. ಮೇ 7ರಿಂದ 31ರ ವರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಿಜೆಪಿ ಪ್ರಕೋಷ್ಠದ ಕಾರ್ಯಕ್ರಮಗಳನ್ನು ನಡೆಯಲಿವೆ ಎಂದು ಹೇಳಿದರು.
39 ಪ್ರಕೋಷ್ಠಗಳಿದ್ದು, ಪ್ರತಿ ಪ್ರಕೋಷ್ಠದಲ್ಲಿ 9 ಜನರ ಸಮಿತಿ ಇರಲಿದ್ದು, 312 ಮಂಡಳಗಳನ್ನು ರಚಿಸಲಾಗಿದೆ. ವಿವಿಧ ಪ್ರಕೋಷ್ಠಗಳಲ್ಲಿ ಈಗಾಗಲೇ 30 ಸಾವಿರ ಕಾರ್ಯಕರ್ತರಿದ್ದಾರೆ. ಇದನ್ನು 51 ಸಾವಿರಕ್ಕೆ ಹೆಚ್ಚಿಸಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ 24 ಪ್ರಕೋಷ್ಠಗಳಿದ್ದು, ಜಿಲ್ಲಾ ಸಮಾವೇಶದಲ್ಲಿ 1,600 ಪ್ರಕೋಷ್ಠಗಳ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಪಕ್ಷದ ಪ್ರಮುಖರಾದ ಕೆ. ಗಿರೀಶ್ ಪಟೇಲ್, ಎಸ್.ದತ್ತಾತ್ರಿ, ಎಸ್. ಜ್ಞಾನೇಶ್ವರ್, ಶಿವರಾಜ್, ಜಯರಾಮ್, ಸತೀಶ್, ದೇವರಾಜ್ ಮಂಡೇನಕೊಪ್ಪ, ಸೋಮೇಶ್ ಶೇಟ್, ವಿಕ್ರಮ್, ಸುಧಾಕರ್, ಕೆ.ವಿ. ಅಣ್ಣಪ್ಪ ಉಪಸ್ಥಿತರಿದ್ದರು.