ಫಾರೆಸ್ಟ್ ಗಾರ್ಡ್‍ಗಳ ಮೇಲೆ ಹಲ್ಲೆ, ಕೊಲೆ ಬೆದರಿಕೆ, ಠಾಣೆ ಮೆಟ್ಟಿಲೇರಿದ ಕೇಸ್

ಸುದ್ದಿ ಕಣಜ.ಕಾಂ | TALUK | CRIME NEWS
ತೀರ್ಥಹಳ್ಳಿ: ತಾಲೂಕಿನ ಹಣಗೆರೆಕಟ್ಟೆ ಧಾರ್ಮಿಕ ಕೇಂದ್ರ ಬಳಿಯ ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿ ಮೋಜು ಮಸ್ತಿ ಮಾಡುತ್ತಿದ್ದ ಗುಂಪೊಂದು ಅರಣ್ಯ ಇಲಾಖೆಯ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ.

READ | ಲೇಖಪ್ಪ‌ ನಾಪತ್ತೆ ಪ್ರಕರಣಕ್ಕೆ‌ ಟ್ವಿಸ್ಟ್, ಮರ್ಡರ್ ಹಿಂದಿನ ಕಾರಣವೇನು?

ಫಾರೆಸ್ಟ್ ಗಾರ್ಡ್ ಗಳಾದ ಯೋಗೇಶ್ವರಪ್ಪ, ಶಿವರಾಜ್, ಲಕ್ಷ್ಮಣ್ ಅವರೊಂದಿಗೆ ಬೀಟ್ ಬೌಂಡರಿ ನೋಡಿಕೊಂಡು ಏಪ್ರಿಲ್ 29ರಂದು ಬರುತ್ತಿದ್ದಾಗ ಸಂಜೆ ವೇಳೆ ವ್ಯನ್ಯಜೀವಿ ವಿಭಾಗದ ಅರಣ್ಯದಲ್ಲಿ ಬೆಂಕಿಕೆರೆಯ ಮೂವರು ಸೇರಿಕೊಂಡು ಮದ್ಯಪಾನ ಸೇವಿಸಿ, ಪ್ಲಾಸ್ಟಿಕ್ ಬಾಟಲಿಗಳನ್ನು ಬಿಸಾಡಿ ಗಲೀಜು ಮಾಡುತ್ತಿದ್ದರು. ಈ ಬಗ್ಗೆ ತಿಳಿಹೇಳಿದ್ದಕ್ಕೆ ಫಾರೆಸ್ಟ್ ಗಾರ್ಡ್ ಗಳ ಮೇಲೆಯೇ ಹಲ್ಲೆ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸಿಬ್ಬಂದಿಗೆ ಅವಾಚ್ಯವಾಗಿ ಬೈಯ್ದಿದ್ದಲ್ಲದೇ ಕೊಲೆ ಬೆದರಿಕೆ ಕೂಡ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಫೋನ್ ಕಸಿದುಕೊಂಡು ಒಡೆದರು
ಅರಣ್ಯ ಇಲಾಖೆ ಸಿಬ್ಬಂದಿ ಮಹೇಶ್ ಅವರು ಮೇಲಾಧಿಕಾರಿಗೆ ಕರೆ ಮಾಡಿ ಮಾಹಿತಿ ನೀಡಲು ಮುಂದಾದಾಗ ಮೊಬೈಲ್ ಅನ್ನು ಕಸಿದುಕೊಂಡು ಒಡೆದು ಅಂದಾಜು 10 ಸಾವಿರ ರೂಪಾಯಿ ಹಾನಿ ಮಾಡಲಾಗಿದೆ. ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.