ಮನೆಯ ಬೀಗ ಮುರಿದು ಚಿನ್ನಾಭರಣ ಕದ್ದೊಯ್ದ ಕಳ್ಳರು

ಸುದ್ದಿ ಕಣಜ.ಕಾಂ | TALUK | CRIME NEWS
ತೀರ್ಥಹಳ್ಳಿ: ತಾಲೂಕಿನ ಯೋಗಿಮಳಲಿ ಮೈನ್ಸ್ ಗ್ರಾಮದ ಮನೆಯೊಂದರಲ್ಲಿ 61,500 ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು ಇತ್ತೀಚೆಗೆ ಕಳ್ಳತನ ಮಾಡಲಾಗಿದೆ.

READ | ಫಾರೆಸ್ಟ್ ಗಾರ್ಡ್‍ಗಳ ಮೇಲೆ ಹಲ್ಲೆ, ಕೊಲೆ ಬೆದರಿಕೆ, ಠಾಣೆ ಮೆಟ್ಟಿಲೇರಿದ ಕೇಸ್

ಗ್ರಾಮದ ಆನಂದ್ ನಾಯ್ಕ್ ಎಂಬುವವರ ಮನೆಯಲ್ಲಿ ಕಳ್ಳತನ ಮಾಡಲಾಗಿದೆ. ಕೋಣಂದೂರಿಗೆ ಹೋಗಿ ವಾಪಸ್ ಬರುವ ಹೊತ್ತಿಗೆ 5 ಗ್ರಾಂ ತೂಕದ ಬಂಗಾರದ ಓಲೆ, ಇನ್ನೊಂದು ಜೊತೆ 5 ಗ್ರಾಂ ಬಂಗಾರದ ಬಂಗಾರದ ಓಲೆ, 5 ಗ್ರಾಂನ ಬಂಗಾರದ ಉಂಗುರ ಹಾಗೂ 1500 ರೂಪಾಯಿ ನಗದು ಕಳ್ಳತನ ಮಾಡಲಾಗಿದೆ. ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.