ಎಂಪಿಎಂ ಸಕ್ಕರೆ ಕಾರ್ಖಾನೆ ಕಬ್ಬು ಬೆಳೆಗಾರರ 12 ವರ್ಷ ಹೋರಾಟಕ್ಕೆ ಜಯ

ಸುದ್ದಿ ಕಣಜ.ಕಾಂ | DISTRICT | SUGAR FACTORY
ಶಿವಮೊಗ್ಗ: ಕಳೆದ 12 ವರ್ಷಗಳಿಂದ ನಿರಂತರ ನಡೆಸಿದ ಹೋರಾಟಗಳಿಗೆ ಈಗ ಜಯ ದೊರೆತಿದೆ. ಭದ್ರಾವತಿ ಎಂಪಿಎಂ ಸಕ್ಕರೆ ಕಾರ್ಖಾನೆ ಕಬ್ಬು ಬೆಳೆಗಾರರಿಗೆ 12 ವರ್ಷಗಳಿಂದ ಬಾಕಿ ಉಳಿದಿದ್ದ 2.94 ಕೋಟಿ ರೂಪಾಯಿಯನ್ನು ಬುಧವಾರ ಬಿಡುಗಡೆ ಮಾಡಲಾಗಿದೆ.

READ| ಶಿವಮೊಗ್ಗದ ಹಲವು ಪಂಚಾಯಿತಿಗಳಿಗೆ ಚುನಾವಣೆ ಫಿಕ್ಸ್, ಯಾವ್ಯಾವ ಗ್ರಾಪಂಗಳಲ್ಲಿ ಎಲೆಕ್ಷನ್

ಏನಿದು ಪ್ರಕರಣ?
2010-11ರಲ್ಲಿ ಕಾರ್ಖಾನೆಗೆ ಪೂರೈಕೆ ಮಾಡಿದ್ದ ಕಬ್ಬಿಗೆ ಸರ್ಕಾರ ಪ್ರತಿ ಟನ್ ಗೆ 1,800 ರೂ. ನಿಗದಿ ಮಾಡಿತ್ತು. ಆದರೆ, ಮೈಶುಗರ್ ಸಕ್ಕರೆ ಕಾರ್ಖಾನೆ ಪ್ರತಿ ಟನ್ ಗೆ 1,900 ರೂಪಾಯಿ ಘೋಷಿಸಿತ್ತು. ಹೀಗಾಗಿ, ಆಗ ಮುಖ್ಯಮಂತ್ರಿಯಾಗಿದ್ದ ಡಿ.ವಿ.ಸದಾನಂದ ಗೌಡ ಅವರು ಭದ್ರಾವತಿ ಕಾರ್ಖಾನೆ ರೈತರಿಗೂ ಪ್ರತಿಟನ್ ಗೆ ಹೆಚ್ಚುವರಿಯಾಗಿ 100 ರೂ. ಘೋಷಣೆ ಮಾಡಿದ್ದರು. ತದನಂತರ, ಕಾರ್ಖಾನೆಯಿಂದ ಕಬ್ಬು ಬೆಳೆಗಾರರಿಗೆ ಹೆಚ್ಚುವರಿ ಮೊತ್ತವನ್ನು ನೀಡಿರಲಿಲ್ಲ. ಇದರ ವಿರುದ್ಧ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ಜಿಲ್ಲಾಧ್ಯಕ್ಷ ಕೆ.ಈರಣ್ಣ ಆದಿಯಾಗಿ ಎಲ್ಲರು ಪ್ರತಿಭಟನೆಗೆ ಮುಂದಾದರು. ವಿವಿಧ ಹಂತಗಳಲ್ಲಿ ನಡೆದ ಹೋರಾಟದ ಫಲವಾಗಿ ಬಾಕಿ ಹಣವನ್ನು ಬಿಡುಗಡೆ ಮಾಡಲಾಗಿದೆ.