ಶಿವಮೊಗ್ಗ ನಗರದ ಹಲವೆಡೆ ನಾಳೆ ಕರೆಂಟ್ ಇರಲ್ಲ

ಸುದ್ದಿ ಕಣಜ.ಕಾಂ | CITY | POWER CUT
ಶಿವಮೊಗ್ಗ: ಮೇ 8 ರಂದು ಮೆಗ್ಗಾನ್ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎಂಜಿಎಫ್ 1, 2, 4 ಮತ್ತು 5 ರಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೆ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

READ | KSRTC ಬಸ್ ನಿಲ್ದಾಣದಲ್ಲೇ ಕರ್ತವ್ಯನಿರತ ಚಾಲಕನ ಮೇಲೆ ಹಲ್ಲೆ

ಎಲ್ಲೆಲ್ಲಿ ಪವರ್ ಕಟ್?
ಮೆಗ್ಗಾನ್ ಆಸ್ಪತ್ರೆ, ಶರಾವತಿನಗರ, ಬಿಎಸ್‍ಎನ್‍ಎಲ್ ಕ್ವಾಟ್ರಸ್, ಸಕ್ರ್ಯೂಟ್ ಹೌಸ್, ಎಸ್.ಪಿ.ಕಚೇರಿ, ಪೊಲೀಸ್ ಠಾಣೆ, ಸಾಗರ ಮುಖ್ಯ ರಸ್ತೆ, ಅಶೋಕ್‍ನಗರ, ಎ.ಆರ್.ಬಿ.ಕಾಲೋನಿ, ನಾಗರಾಜಪುರ ಬಡಾವಣೆ, ಹೊಸಮನೆ, ಕುವೆಂಪು ರಸ್ತೆ, ಜ್ಯೋತಿ ಗಾರ್ಡನ್, ದುರ್ಗಿಗುಡಿ, ಸವರ್‍ಲೈನ್ ರಸ್ತೆ, ಎಲ್‍ಐಸಿ ಕಚೇರಿ, ಮಿಷನ್ ಕಾಂಪೌಂಡ್ , ಜೈಲ್ ಸರ್ಕಲ್, ಹಂದಿಗೊಲ್ಲರ ಕೇರಿ, ವೀಣಾ ಶಾರದಾ ಶಾಲೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.