ಸುದ್ದಿ ಕಣಜ.ಕಾಂ | DISTRICT | SHIVAMOGGA RAIN
ಶಿವಮೊಗ್ಗ: ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ.
ಇಂದು ಶಿವಮೊಗ್ಗ ನಗರದಲ್ಲಿ ಸುಮಾರು 10 ಸೆ.ಮೀಟರ್ ದಿಂದ 15 ಸೆ.ಮೀ. ಮಳೆಯಾಗುವ ಸಾಧ್ಯತೆ ಇದೆ. ಮಲೆನಾಡಿನ ತಾಲೂಕುಗಳಿಗಿಂತ ನಗರದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
READ | ಶಿವಮೊಗ್ಗ ಜಿಲ್ಲೆಯಾದ್ಯಂತ ಶಾಲೆಗಳಿಗೆ ರಜೆ ಘೋಷಣೆ
ಬೆಳಗ್ಗೆ 6ರಿಂದ 9 ಗಂಟೆಯವರೆಗೆ ಸುಮಾರು 6 ಸೆ.ಮೀ.ವರೆಗೆ ವರ್ಷಧಾರೆಯಾಗಲಿದೆ.
ಬೆಳಗ್ಗೆ 10ರಿಂದ 11ರವರೆಗೆ 5 ಎಂ.ಎಂ, ಮಧ್ಯಾಹ್ನ 12ರಿಂದ 5ಎಂಎಂ, 3ರಿಂದ 4ರ ವರೆಗೆ 10 ಎಂಎಂ, ಸಂಜೆ 5ವರೆಗೆ 10 ಎಂಎಂ ಮಳೆಯಾಗಲಿದೆ. ನಾಳೆ ಬೆಳಗ್ಗೆಯವರೆಗೆ ಮೋಡ ಕವಿದ ವಾತಾವರಣ ಮುಂದುವರಿಯಲಿದೆ ಎಂದು ಕೆಪಿಟಿಸಿಎಲ್ ಎಂಆರ್.ಎಸ್. ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಬಿ.ಆರ್.ಯೋಗೀಶ್ ತಿಳಿಸಿದ್ದಾರೆ.