SSLC RESULT ಎಸ್ಸೆಸ್ಸೆಲ್ಸಿ‌ ಫಲಿತಾಂಶ ಪ್ರಕಟ, ಶಿವಮೊಗ್ಗ ಜಿಲ್ಲೆಗೆ ಯಾವ ಗ್ರೇಡ್, ರಾಜ್ಯದ ವಿವಿಧ ಜಿಲ್ಲೆಗಳ ಮಾಹಿತಿ ಇಲ್ಲಿದೆ

ಸುದ್ದಿ ಕಣಜ.ಕಾಂ | KARNATAKA | SSLC RESULT
ಶಿವಮೊಗ್ಗ: ಎಸ್ಸೆಸ್ಸೆಲ್ಸಿ‌ ಫಲಿತಾಂಶ ಗುರುವಾರ ಮಧ್ಯಾಹ್ನ ಪ್ರಕಟವಾಗಿದ್ದು, ಶಿವಮೊಗ್ಗ ಸೇರಿ 32 ಜಿಲ್ಲೆಗಳಿಗೆ ಎ-ಗ್ರೇಡ್ ಲಭಿಸಿದೆ. ಬೆಂಗಳೂರು ದಕ್ಷಿಣ ಹಾಗೂ ಯಾದಗಿರಿ ಜಿಲ್ಲೆಗೆ ಬಿ-ಗ್ರೇಡ್ ಲಭಿಸಿದೆ. ಶೇ.75ರಿಂದ 100 ಫಕಿತಾಶ ಪಡೆದ ಜಿಲ್ಲೆಗಳಿಗೆ ಎ-ಗ್ರೇಡ್, ಕನಿಷ್ಠ ಶೇ.60ರಿಂದ ಗರಿಷ್ಠ ಶೇ.75ರೊಳಗೆ ಫಲಿತಾಂಶ ಪಡೆದ ಜಿಲ್ಲೆಗೆ ಬಿ-ಗ್ರೇಡ್ ಹಾಗೂ ಶೇ.60ಕ್ಕಿಂತ ಕಡಿಮೆ ಫಲಿತಾಂಶ ಗಳಿಸಿದ ಜಿಲ್ಲೆಗಳಿಗೆ ಸಿ-ಗ್ರೇಡ್ ಅನ್ನು ಶಿಕ್ಷಣ ಇಲಾಖೆಯಿಂದ ನೀಡಲಾಗುತ್ತದೆ.
2021-22ನೇ ಸಾಲಿನ ಎಸ್ಸೆಸ್ಸೆಲ್ಸಿ‌ ಪರೀಕ್ಷೆಗೆ ನಗರ ಭಾಗದಿಂದ 3,38,101 ವಿದ್ಯಾರ್ಥಿಗಳು ರಾಜ್ಯದಲ್ಲಿ ಪರೀಕ್ಷೆಗೆ ಹಾಜರಾಗಿದ್ದು ಅದರಲ್ಲಿ‌ 2,92,946 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ರಾಜ್ಯದಲ್ಲಿ‌‌ ಈ ಸಲ‌‌ ಶೇ.86.64 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಅದೇ ರೀತಿ, ಗ್ರಾಮೀಣ ಭಾಗದಿಂದ‌ 4,69,105 ವಿದ್ಯಾರ್ಥಿಗಳು ಹಾಜರಾಗಿದ್ದು, 4,28,385 (ಶೇ.91.32) ಪಾಸ್ ಆಗಿದ್ದಾರೆ.
Click here for SSLC Result | Link 1 | Link 2 | Link 3 | Link 4

 

Leave a Reply

Your email address will not be published.