ಫ್ರೀಡಂ ಪಾರ್ಕ್‍ನಲ್ಲಿ ರಾಶಿ ರಾಶಿ ಮದ್ಯದ ಬಾಟಲಿ!

ಸುದ್ದಿ ಕಣಜ.ಕಾಂ | CITY | FREEDOM PARK
ಶಿವಮೊಗ್ಗ: ನಿಕಟ ಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮಹತ್ವಾಕಾಂಕ್ಷೆಯಿಂದಾಗಿ ಶಿವಮೊಗ್ಗ ನಗರದ ಹೃದಯ ಭಾಗದಲ್ಲಿ ಫ್ರೀಡಂ ಪಾರ್ಕ್ ಕಾಮಗಾರಿ ಪೂರ್ಣಗೊಳ್ಳುವ ಹಂತದಲಿದೆ. ಇದು ಸಾರ್ವಜನಿಕರ ಪಾಲಿಗೆ ಬಹುದೊಡ್ಡ ಆಸ್ತಿಯಾಗಲಿದೆ. ಆದರೆ, ಸೂಕ್ತ ನಿಗಾ ಇಲ್ಲದ ಕಾರಣದಿಂದಾಗಿ ಫ್ರೀಡಂ ಪಾರ್ಕ್ ಈಗ ಕುಡುಕರ ತಾಣವಾಗಿ ಮಾರ್ಪಟ್ಟಿದೆ. ಯಾವುದೇ ಭಯವಿಲ್ಲದೇ ಅನೈತಿಕ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ.
ಇದಕ್ಕೆ ಸಾಕ್ಷಿ ಫ್ರೀಡಂ ಪಾರ್ಕ್ ನಲ್ಲಿ ಪರೋಪಕಾರಂ ತಂಡದಿಂದ ಸ್ವಚ್ಛತೆ ಕಾರ್ಯ ನಡೆಸುವಾಗ ಲಭಿಸಿರುವ ಮದ್ಯದ ಬಾಟಲಿ ಇತ್ಯಾದಿಗಳು. ಪರೋಪಕಾರಂನ ಸ್ವಚ್ಛತಾ ಕಾರ್ಯಕ್ಕೆ ವಾಯುವಿಹಾರಿಗಳು, ವಿಕಲಚೇತನರು, ವಿವಿಧ ಸಂಘ, ಸಂಸ್ಥೆಯವರು, ಪರಿಸರಾಸಕ್ತರು ಕೈಜೋಡಿಸಿದರು.

ಫ್ರೀಡಂ ಪಾರ್ಕ್‍ನಲ್ಲಿ ಕಾರು’ಬಾರು’ (VIDEO REPORT)

READ | ಜೋಗ‌ ಜಲಪಾತಕ್ಕೆ ಜೀವಕಳೆ, ಮೂರು ದಿನಗಳಲ್ಲಿ‌ 6 ಸಾವಿರಕ್ಕೂ ಅಧಿಕ ಪ್ರವಾಸಿಗರ ಭೇಟಿ

ಡಿಸಿ ಭೇಟಿ ಬಳಿಕವೂ ಬದಲಾಗದ ಸ್ಥಿತಿ
ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು ಇತ್ತೀಚೆಗೆ ಫ್ರೀಡಂ ಪಾರ್ಕ್‍ಗೆ ಭೇಟಿ ನೀಡಿದ್ದು, ಅಲ್ಲಿನ ಅವ್ಯವಸ್ಥೆಯನ್ನು ವೀಕ್ಷಿಸಿ ಅಧಿಕಾರಿಗಳನ್ನು ತರಾಟೆಗೂ ತೆಗೆದುಕೊಂಡಿದ್ದರು. ಮಹಾನಗರ ಪಾಲಿಕೆಗೆ ಇದರ ಜವಾಬ್ದಾರಿ ಕೂಡ ನೀಡಿದ್ದರು. ಆ ಕ್ಷಣಕ್ಕೆ ಸರಿ ಎಂದಿರುವ ಪಾಲಿಕೆ ಅಧಿಕಾರಿಗಳು ನಂತರ ಇದರೆಡೆಗೆ ತಲೆಯೇ ಕೆಡಿಸಿಕೊಂಡಿಲ್ಲ ಪಾರ್ಕ್ ನ ಈಗಿನ ಸ್ಥಿತಿಯೇ ಸಾಕ್ಷಿಯಾಗಿದೆ. ಕೋಟ್ಯಂತರ ಹಣ ಖರ್ಚು ಮಾಡಿ ಪಾರ್ಕ್ ಮಾಡಲಾಗಿದೆ. ಅದನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಸಾರ್ವಜನಿಕರೂ ಮುಂದಾಗಬೇಕಾಗಿದೆ ಎನ್ನುವುದು ಪರಿಸರ ಆಸಕ್ತರ ಮನವಿಯಾಗಿದೆ.

ಶಿವಮೊಗ್ಗದ ಫ್ರೀಡಂ ಪಾರ್ಕ್ ನಲ್ಲಿ‌ ಆಯುರ್ವೇದ ಸಸ್ಯ ಸಂಕುಲ

Leave a Reply

Your email address will not be published.