ಭದ್ರಾವತಿಯಲ್ಲಿ 24 ವರ್ಷಗಳ ಬಳಿಕ ನಡೆಯಲಿದೆ ಜಾತ್ರಾ ಮಹೋತ್ಸವ, ಏನಿದರ ವಿಶೇಷ?

Bhadravathi Jatre

 

 

ಸುದ್ದಿ ಕಣಜ.ಕಾಂ | DISTRICT | JATRA MAHOTSAVA  
ಶಿವಮೊಗ್ಗ: ಇತಿಹಾಸ ಪ್ರಸಿದ್ಧ ಹಿರಿಮಾವುರದಮ್ಮ ದೇವಿ (Hirimaavudaramma devi) ಯ ಸಿಡಿ ಜಾತ್ರಾ ಮಹೋತ್ಸವವು ಜೂನ್ 8ರಂದು ಆಯೋಜಿಸಲಾಗಿದೆ ಎಂದು ಆನವೇರಿ ಗ್ರಾಮದ ಪ್ರಮುಖ ಎ.ಜಿ.ಜಗದೀಶಗೌಡ ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಭದ್ರಾವತಿ ತಾಲೂಕಿನ ಆನವೇರಿ ಗ್ರಾಮದಲ್ಲಿ 7 ಗ್ರಾಮಗಳ ಶಕ್ತಿದೇವತೆಯಾದ ಶ್ರೀ ಹಿರಿಮಾವುರದಮ್ಮ ದೇವಿಯ ಸಿಡಿ ಜಾತ್ರಾ ಮಹೋತ್ಸವ ಜರುಗಲಿದೆ ಎಂದು ತಿಳಿಸಿದರು.

READ | ಬೈಕ್ ತಡೆದು ದರೋಡೆ ಮಾಡಿದ ಮೂವರು ಅರೆಸ್ಟ್

24 ವರ್ಷಗಳ ನಂತರ ಜಾತ್ರಾ ಮಹೋತ್ಸವ
ಪುರಾಣ ಪ್ರಸಿದ್ಧ ದೇವಸ್ಥಾನ ಇದಾಗಿದ್ದು, ಇಲ್ಲಿ ಜಾತ್ರೆ ನೆರವೇರಬೇಕಾದರೆ ದೇವಿಯ ಅಪ್ಪಣೆ ಆಗಬೇಕು. ಹೀಗಾಗಿ, ಕಳೆದ 24 ವರ್ಷಗಳಿಂದ ಹಬ್ಬ ನಡೆದಿರಲಿಲ್ಲ. ಜೊತೆಗೆ, ಅತಿವೃಷ್ಟಿ, ಅನಾವೃಷ್ಟಿ ಹಾಗೂ ಕೋವಿಡ್ ನಂತಹ ನಾನಾ ಕಾರಣಗಳಿಂದಾಗಿ ಹಬ್ಬ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ, 4 ವರ್ಷಗಳ ನಂತರ ಈಗ ಜಾತ್ರೆ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ಬಾರಿ ದೇವಿಯು ಅಪ್ಪಣೆ ನೀಡಿದ್ದು, ಅದ್ಧೂರಿಯಾಗಿ 7 ಊರಿನ ಮುಖಂಡರ ಮತ್ತು ಗ್ರಾಮಸ್ಥರ ಸಹಕಾರದಲ್ಲಿ ಜಾತ್ರೆ ನಡೆಯಲಿದೆ. 8ರಂದು ಮಧ್ಯಾಹ್ನ 2 ಗಂಟೆಗೆ ದೇವಿಯ ಸಿಡಿ ಜಾತ್ರಾ ಮಹೋತ್ಸವ ನಡೆಯಲಿದೆ ಎಂದರು.
ಈ ಸಲ 4 ಲಕ್ಷ ಜನ ಸೇರುವ ಸಾಧ್ಯತೆ
1998ರಲ್ಲಿ ಜಾತ್ರಾ ಮಹೋತ್ಸವ ಆಯೋಜಿಸಲಾಗಿತ್ತು. ಆಗ ಸುಮಾರು 2 ಲಕ್ಷ ಭಕ್ತಾದಿಗಳು ಸೇರಿದ್ದರು. ಈ ಸಲ ಸುಮಾರು 4 ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆ ಇದೆ. ಭsÀಕ್ತರು ದೇವಿಯನ್ನು ನಂಬಿದ್ದು, ಸವದತ್ತಿ, ಚಂದ್ರಗುತ್ತಿ ಬಳಿಕ ಹಿರೇಮಾವುರದಮ್ಮ ದೇವಿ ನಾಡಿನಲ್ಲಿ ಪ್ರಸಿದ್ಧ ದೇವತೆ ಎಂದು ತಿಳಿಸಿದರು.

READ | ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಕಾರ್ಮಿಕ‌‌‌ ಸಾವು

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗಮನ
ಮಳೆಯಿಂದ ಗುಡ್ಡದ ಮೇಲಿನ ದೇವಿಯ ದೇಗುಲಕ್ಕೆ ತೊಂದರೆಯಾಗಿತ್ತು. ಆಗ ಸಿಎಂ ಆಗಿದ್ದ ಯಡಿಯೂರಪ್ಪ ಅವರು 5 ಕೋಟಿ ರೂ. ಅನುದಾನ ನೀಡಿದ್ದರು. ಅವರು ಜೂನ್ 5ರಂದು ದೇವಿಯ ದರ್ಶನ ಪಡೆಯಲು ಬರುತ್ತಿದ್ದಾರೆ ಎಂದರು.
ನಾಗಸಮುದ್ರದ ಮುಖಂಡ ಎನ್.ಪಿ. ಷಡಾಕ್ಷರಪ್ಪ ಮಾತನಾಡಿ, 8ರಂದು ನಡೆಯುವ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಗೃಹ ಸಚಿವ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ, ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಕೆ.ಬಿ. ಅಶೋಕ್ ನಾಯ್ಕ್, ಬಿ.ಕೆ. ಸಂಗಮೇಶ್, ಆಯನೂರು ಮಂಜುನಾಥ್, ಎಸ್. ರುದ್ರೇಗೌಡ, ಡಿ.ಎಸ್. ಅರುಣ್, ಎಂ.ಪಿ. ರೇಣುಕಾಚಾರ್ಯ, ಮಾಡಾಳ್ ವಿರೂಪಾಕ್ಷಪ್ಪ ಸೇರಿದಂತೆ ಹಲವರು ಆಗಮಿಸಲಿದ್ದಾರೆ ಎಂದು ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಶಾಸಕ ಕೆ.ಬಿ.ಅಶೋಕ್ ನಾಯ್ಕ್, ಗುಡುಮಗಟ್ಟೆಯ ಸಿದ್ಧಲಿಂಗಪ್ಪ, ಆನವೇರಿಯ ತೀರ್ಥಪ್ಪ, ನಟರಾಜಗೌಡ, ಮಲ್ಲಿಗೇನಹಳ್ಳಿಯ ಎಂ.ಬಿ. ಲೋಹಿತ್, ಮೈದೊಳಿನ ಎಸ್. ಹಾಲೇಶಪ್ಪ, ಮಂಗೋಟೆಯ ರವಿಗೌಡ, ಇಟ್ಟಿಗೆಹಳ್ಳಿಯ ಮಲ್ಲೇಶಪ್ಪ, ಗುಡುಮಗಟ್ಟೆಯ ಕುಬೇಂದ್ರಪ್ಪ, ಎಸ್.ಎಚ್. ರಾಜಪ್ಪ ಉಪಸ್ಥಿತರಿದ್ದರು.

https://suddikanaja.com/2022/03/17/kote-marikamba-jatra-mahotsava-at-shimoga/

Leave a Reply

Your email address will not be published. Required fields are marked *

error: Content is protected !!