ಕುರಿಗಾಯಿಗಳೇ ಗಮನಿಸಿ, ವಿಮೆ ಸೌಲಭ್ಯಕ್ಕಾಗಿ ಕೂಡಲೇ ಅರ್ಜಿ ಸಲ್ಲಿಸಿ, ಎಷ್ಟು ವಿಮೆ ಲಭ್ಯ, ಯಾರೆಲ್ಲ‌ ಅರ್ಹರು?

Sheep and Goat

 

 

ಸುದ್ದಿ ಕಣಜ.ಕಾಂ | DISTRICT | HEALTH INSURANCE
ಶಿವಮೊಗ್ಗ: 2022-23ನೇ ಸಾಲಿಗೆ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ (Karnataka Sheep and Wool Development Corporation)ದಿಂದ ಕುರಿ/ಮೇಕೆ ಸಾಕಾಣಿಕೆದಾರರು/ವಲಸೆ ಕುರಿಗಾರರು ಆಕಸ್ಮಿಕ ಮರಣ ಹೊಂದಿದಲ್ಲಿ ₹5 ಲಕ್ಷ ವಿಮೆ (insurance) ಸೌಲಭ್ಯ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಮೇ 25 ರಿಂದ ಜಿಲ್ಲೆಯ ಎಲ್ಲ ತಾಲ್ಲೂಕಿನ ಮುಖ್ಯ ಪಶು ವೈದ್ಯಾಧಿಕಾರಿಗಳು(ಆಡಳಿತ) ಅಥವಾ ಸಹಾಯಕ ನಿರ್ದೇಶಕರು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ ನಿಯಮಿತ ಶಿವಮೊಗ್ಗ ಇವರಿಂದ ಅರ್ಜಿಗಳನ್ನು ಪಡೆದು ಅಗತ್ಯ ದಾಖಲಾತಿಗಳೊಂದಿಗೆ ಭರ್ತಿ ಮಾಡಿದ ಅರ್ಜಿಗಳನ್ನು ಜೂನ್ 8ರೊಳಗೆ ಹತ್ತಿರದ ಪಶು ವೈದ್ಯ ಸಂಸ್ಥೆ ಅಥವಾ ತಾಲ್ಲೂಕು ಸಹಾಯಕ ನಿರ್ದೇಶಕರಿಗೆ ಸಲ್ಲಿಸಬಹುದು.

READ | ಶಿವಮೊಗ್ಗದ ಸರ್ಜಿ ಆಸ್ಪತ್ರೆಯಲ್ಲಿ 4 ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ!

ಯಾರೆಲ್ಲ ವಿಮೆ ಪಡೆಯಲು‌ ಅರ್ಹರು?
ಕನಿಷ್ಠ 30 ಕುರಿ/ಮೇಕೆ ಹೊಂದಿರುವ ವಲಸೆ ಕುರಿಗಾಹಿ ಕುಟುಂಬದ ಗರಿಷ್ಠ ನಾಲ್ಕು ಸದಸ್ಯರಿಗೆ ಹಾಗೂ ಇತರೆ ಕುರಿಗಾಹಿ ಕುಟುಂಬದ ಒಬ್ಬ ಸದಸ್ಯರು ವಿಮಾ ಸೌಲಭ್ಯ ಪಡೆಯಲು ಅರ್ಹರಿರುತ್ತಾರೆ. ವಲಸೆ ಕುರಿಗಾಹಿ ಕುಟುಂಬದವರಿಗೆ ಪ್ರಥಮ ಆದ್ಯತೆ ನೀಡಲಾಗುವುದು.
ಮಾಹಿತಿಗಾಗಿ ಸಂಪರ್ಕಿಸಿ
ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ ಶಿವಮೊಗ್ಗ ಕಚೇರಿ ದೂರವಾಣಿ ಸಂಖ್ಯೆ: 9611121839, ಪಶುವೈದ್ಯಾಧಿಕಾರಿಗಳು ಶಿವಮೊಗ್ಗ 7406897075, ಶಿಕಾರಿಪುರ 9972957278, ಭದ್ರಾವತಿ 8722365101, ಸಾಗರ 9481255897, ಸೊರಬ 9900632880, ತೀರ್ಥಹಳ್ಳಿ 08181-118521, ಹೊಸನಗರ 9449623236 ಮೊಬೈಲ್ ಸಂಖ್ಯೆಗಳಿಗೆ ಸಂಪರ್ಕಿಸಬಹುದೆಂದು ನಿಗಮದ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

https://suddikanaja.com/2020/12/21/health-insurance-to-memcos-members-shivamogga/

Leave a Reply

Your email address will not be published. Required fields are marked *

error: Content is protected !!