ಸುದ್ದಿ ಕಣಜ.ಕಾಂ | DISTRICT | JOB JUNCTION
ಶಿವಮೊಗ್ಗ: ನಿರುದ್ಯೋಗಿ ಹೆಣ್ಣು ಮಕ್ಕಳಿಗೆ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಹಾಸ್ಪಿಟಲ್ ಡ್ಯೂಟಿ ಅಸಿಸ್ಟೆಂಟ್ (Hospital duty assistant) ಮತ್ತು ಹೋಮ್ ಕೇರ್ ನರ್ಸಸ್ (Home care nurses) ಈ ಜಾಬ್ ರೋಲ್ನಲ್ಲಿ ಒಂದು ತಿಂಗಳ ಉಚಿತ ತರಬೇತಿ ನೀಡಲಾಗುತ್ತಿದೆ. ಆಸಕ್ತರು ತರಬೇತಿಯ ಸದುಪಯೋಗ ಪಡೆಯುವಂತೆ ಜಿಲ್ಲಾ ಕೌಶಲಾಭಿವೃದ್ದಿ ಅಧಿಕಾರಿ ಎಚ್.ಎಂ.ಸುರೇಶ್ ತಿಳಿಸಿದ್ದಾರೆ.
ಜಿಲ್ಲೆಯ ಆರೋಗ್ಯ ತರಬೇತಿ ಕೇಂದ್ರ(ಡಿಟಿಸಿ)ದಲ್ಲಿ ಸೆಂಟರ್ ಫಾರ್ ಹೆಲ್ತ್ ಆ್ಯಂಡ್ ಡೆವೆಲಪ್ಮೆಂಟ್ ಹಾಗೂ ಜಿಲ್ಲಾ ಕೌಶಲಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಇವರ ಸಹಯೋಗದಲ್ಲಿ ತರಬೇತಿ ಏರ್ಪಡಿಸಲಾಗಿದೆ.
READ | ದೇಶದಲ್ಲಿ 36,000 ಹಿಂದೂ ದೇವಸ್ಥಾನ ನಿರ್ಮಾಣವೇ ಮುಖ್ಯ ಗುರಿ
ಅಭ್ಯರ್ಥಿ ಹೊಂದಿರಬೇಕಾದ ಅರ್ಹತೆಗಳೇನು?
ಅಭ್ಯರ್ಥಿಯು 18 ರಿಂದ 42 ವಯೋಮಿತಿಯೊಳಗಿದ್ದು 8ನೇ ತರಗತಿ ಉತ್ತೀರ್ಣರಾಗಿರಬೇಕು. ತರಬೇತಿ ಮುಗಿದ ನಂತರ ಸಂಸ್ಥೆಯ ವತಿಯಿಂದ ಆಸ್ಪತ್ರೆಗಳಲ್ಲಿ ಉದ್ಯೋಗ ದೊರಕಿಸಿಕೊಡಲಾಗುವುದು. ಆಸಕ್ತರು ಮೇ 25 ರೊಳಗೆ https://forms.gle/3ESfUmFEmBKW4Mk77 ಲಿಂಕ್ ಮುಖಾಂತರ ಅಥವಾ ಜಿಲ್ಲಾ ಕೌಶಲಾಭಿವೃದ್ದಿ ಅಧಿಕಾರಿ ಕಚೇರಿ ನಂ.303/528, ಶಾಂತಲಾ ಟವರ್ಸ್, 2ನೇ ಮಹಡಿ, 3ನೇ ಅಡ್ಡ ರಸ್ತೆ, ನೆಹರು ರಸ್ತೆ, ಗಾರ್ಡನ್ ಏರಿಯಾ, ಶಿವಮೊಗ್ಗ (ದೂ.ಸಂ: 08182-255294, 9019485688, 8217478207) ಈ ವಿಳಾಸಕ್ಕೆ ಖುದ್ದಾಗಿ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.