ಸಹಕಾರ ಸಂಘಗಳಿಗೆ ಗುಡ್ ನ್ಯೂಸ್, ಷೇರು ಬಂಡವಾಳದಲ್ಲಿ ಹೆಚ್ಚಳ

currency

 

 

ಸುದ್ದಿ ಕಣಜ.ಕಾಂ | DISTRICT | PUBLIC NOTICE
ಶಿವಮೊಗ್ಗ: ಜಿಲ್ಲೆಯ ಪರಿಶಿಷ್ಟ ಪಂಗಡದ ಜನರು ನಿರ್ವಹಿಸುವ ಸಹಕಾರ ಸಂಘಗಳಿಗೆ ಆರ್ಥಿಕ ಚಟುವಟಿಕೆಗಳಿಗಾಗಿ ಈಗ ನೀಡಲಾಗುತ್ತಿರುವ ಷೇರು ಬಂಡವಾಳವನ್ನು 10 ಲಕ್ಷ ರೂಪಾಯಿಗಳಿಂದ 20 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಲಾಗಿದೆ.

READ | ಬೆಳ್ಳೂರಿಗೆ ಬಂಪರ್‌ ಕೊಡುಗೆ ನೀಡಿದ ಜಿಲ್ಲಾಧಿಕಾರಿ, ಪ್ರಮುಖ 7 ದೂರುಗಳೇನು?

ಪರಿಶಿಷ್ಟ ಪಂಗಡದ ಜನರ ಸಹಕಾರ ಸಂಘಗಳು ಒಟ್ಟು ಸದಸ್ಯರಿಂದ ಪಾವತಿಯಾದ ಷೇರು ಬಂಡವಾಳದ ಶೆ.50ರಷ್ಟು ಅಥವಾ ಗರಿಷ್ಠ 20 ಲಕ್ಷ ರೂ.ಗಳನ್ನು ಷೇರು ಬಂಡವಾಳದ ರೂಪದಲ್ಲಿ ಸರ್ಕಾರದಿಂದ ನೀಡಲಾಗುವುದು ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಚ್.ಇ.ಅಜ್ಜಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಯನ್ನು ಖುದ್ದಾಗಿ ಅಥವಾ ದೂ.ಸಂ.: 08182-279222 ನ್ನು ಸಂಪರ್ಕಿಸುವುದು.

Leave a Reply

Your email address will not be published. Required fields are marked *

error: Content is protected !!