ಕಾನೂನು‌ ಪದವೀಧರರಿಗೆ ವೃತ್ತಿ ತರಬೇತಿ, ಕೂಡಲೇ ಅರ್ಜಿ ಸಲ್ಲಿಸಿ

IMG 20220517 232257 102

 

 

ಸುದ್ದಿ ಕಣಜ‌.ಕಾಂ | DISTRICT | JOB JUNCTION
ಶಿವಮೊಗ್ಗ: 2022-23 ನೇ ಸಾಲಿಗೆ ನ್ಯಾಯವಾದಿ ವೃತ್ತಿಯ ಪ್ರಾಯೋಗಿಕ ಎರಡು ವರ್ಷಗಳ ತರಬೇತಿ ನೀಡಲು ಪರಿಶಿಷ್ಟ ಜಾತಿಯ ಅರ್ಹ ಕಾನೂನು ಪದವೀಧರರಿಂದ ಆನ್ಲೈನ್ ಅರ್ಜಿ ಆಹ್ವಾನಿಸಲಾಗಿದೆ.

READ | ಎರಡೇ‌ ದಿನದ‌ ಮಳೆಗೆ ಶಿವಮೊಗ್ಗದಲ್ಲಿ ಅಂದಾಜು ₹40 ಕೋಟಿಗೂ ಅಧಿಕ‌ ನಷ್ಟ, ಏನೆನು ಹಾನಿ?

ಅರ್ಹತೆಗಳೇನು?
ಅಭ್ಯರ್ಥಿಗಳು ಶಿವಮೊಗ್ಗ ಜಿಲ್ಲೆಯವರಾಗಿದ್ದು, ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು. ಕಾನೂನು ಪದವಿ ಪಡೆದು 02 ವರ್ಷಗಳ ಒಳಗೆ ಇರಬೇಕು. ಪ್ರತಿ ಮಾಹೆ ರೂ.10,000/- ಗಳ ಶಿಷ್ಯವೇತನ ನೀಡಲಾಗುವುದು. ಸಮಾಜ ಕಲ್ಯಾಣ ಇಲಾಖೆಯ ವೆಬ್‍ಸೈಟ್  www.sw.kar.nic.in ಗೆ ಭೇಟಿ ನೀಡಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಜೂನ್ 30 ಕಡೆಯ ದಿನವಾಗಿದೆ.
ಹೆಚ್ಚಿನ ವಿವರಗಳನ್ನು ಉಪ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಪೃಥ್ವಿ ಮ್ಯಾನ್ಶನ್, 100 ಅಡಿ ರಸ್ತೆ, ವಿನೋಬನಗರ, ಶಿವಮೊಗ್ಗ, ದೂರವಾಣಿ ಸಂಖ್ಯೆ: 08182-249241 ನ್ನು ಸಂಪರ್ಕಿಸಬಹುದೆಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!