ಮೀನಾಕ್ಷಿ ಭವನ ಬಳಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದ ವ್ಯಕ್ತಿ ಸಾವು

 

ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ನಗರದ ಮೀನಾಕ್ಷಿ ಭವನ ಸಮೀಪದ ಬಸ್ ನಿಲ್ದಾಣದ ಹತ್ತಿರ ಮೇ 17 ರಂದು ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದ ವ್ಯಕ್ತಿ‌ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಇವರ ಗುರುತು ಪತ್ತೆಯಾಗಿಲ್ಲ.
ಅಸ್ವಸ್ಥಗೊಂಡಿದ್ದ ಸುಮಾರು 75-80 ವರ್ಷದ ವ್ಯಕ್ತಿಯನ್ನು ಆಂಬ್ಯುಲೆನ್ಸ್ ಮೂಲಕ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗಿದೆ ಮೇ 27 ರಂದು ಮೃತಪಟ್ಟಿರುತ್ತಾರೆ. ಈತನ ವಾರಸುದಾರರು ಪತ್ತೆಯಾಗಿಲ್ಲದ್ದರಿಂದ ಶವವನ್ನು ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.

READ | ಇಂದು ವಿಶ್ವ ಸೈಕಲ್‌ ದಿನ‌,  ಸೈಕಲ್ ದಿನದ ವಿಶೇಷವೇನು? ಸೈಕಲ್‌ ತುಳಿಯುವ ಮುನ್ನ ವಹಿಸಬೇಕಾದ ಎಚ್ಚರಿಕೆಗಳೇನು?
ಮೃತನ ಬಗ್ಗೆ ವಿವರ
ಮೃತನು ಸುಮಾರು 5.08 ಅಡಿ ಎತ್ತರ, ತೆಳುವಾದ ಮೈಕಟ್ಟು ಹೊಂದಿದ್ದು, ಎಣ್ಣೆಗೆಂಪು ಮೈಬಣ್ಣ, ಮೈಮೇಲೆ ಬಿಳಿ ಬಣ್ಣದ ಶರ್ಟ್, ಬಿಳಿ ಪಂಚೆ ಮತ್ತು ನೀಲಿ ಬಣ್ಣದ ಬರ್ಮುಡ ಧರಿಸಿರುತ್ತಾರೆ. ಮೃತರ ವಾರಸುದಾರರು ಯಾರಾದರೂ ಇದ್ದಲ್ಲಿ ಕೋಟೆ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

Leave a Reply

Your email address will not be published.