ಲಕ್ಷ ಕಾರಿಗೂ ಮೀರಿದ ಬಾಡಿಗೆ ಸೈಕಲ್

ಸುದ್ದಿ ಕಣಜ.ಕಾಂ | DISTRICT |  GUEST COLUMN
ಶಿವಮೊಗ್ಗ: ಸೈಕಲ್ ಎಲ್ಲರ ಬದುಕಿನಲ್ಲೂ ಭಿನ್ನ ಅನುಭವ ನೀಡಿರಲೇಬೇಕು. ತುಳಿಯುವ ಧಾವಂತದಲ್ಲಿ ಪೇಚಿಗೆ ಸಿಲುಕಿದ್ದು, ಬಾಡಿಗೆ ಸೈಕಲ್ ನಲ್ಲೇ ಪ್ರಪಂಚದ ಸುಖ ಕಂಡಿದ್ದು. ಹೀಗೆ ಹಲವು ಅನುಭವಗಳ ಹಂದರವೇ ಸೈಕಲ್ ಜತೆಗೆ ತಳಕು ಹಾಕಿಕೊಂಡಿವೆ.

READ | ಇಂದು ವಿಶ್ವ ಸೈಕಲ್‌ ದಿನ‌, ಸೈಕಲ್ ದಿನದ ವಿಶೇಷವೇನು? ಸೈಕಲ್‌ ತುಳಿಯುವ ಮುನ್ನ ವಹಿಸಬೇಕಾದ ಎಚ್ಚರಿಕೆಗಳೇನು?

ವಿಶ್ವ ಸೈಕಲ್ ದಿನದಂದು ‘ಸುದ್ದಿ ಕಣಜ‘ ಓದುಗರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
‘ಹೌದು, ನನ್ನ ಬಾಲ್ಯದ ಅನೇಕ ದಿನಗಳನ್ನ ನನ್ನ ಅಜ್ಜಿಯ ಮನೆಯಾದ ಶಿವಮೊಗ್ಗ ತಾಲ್ಲೂಕು ಆಯನೂರಿನಲ್ಲಿ ಕಳೆದದ್ದು. ರಜೆ ಬಂತೆಂದರೆ ಅಜ್ಜಿಯ ಮನೆಗೆ ಹೋಗುವ ಸಂತೋಷ ಹೇಳತೀರದು. ಅಲ್ಲಿ ನಮಗೆ ಸ್ವಂತವಾದ ಸೈಕಲ್ ಇರಲಿಲ್ಲದ ಕಾರಣ ಬಾಡಿಗೆ ಸೈಕಲ್ ತೆಗೆದುಕೊಳ್ಳಬೇಕಾದ ಪ್ರಸಂಗ ಎದುರಾಗುತ್ತಿತ್ತು.’
ಹಣ ಹೊಂದಿಸಬೇಕಾದರೆ ಹರಸಾಹಸ ಪಡಬೇಕಾಗಿತ್ತು. ಬಾಲ್ಯದ ದಿನಗಳಲ್ಲಿ ಸ್ನೇಹಿತರೊಂದಿಗೆ ಏನು ಮಾಡಿದರೂ ಚೆಂದ ಅದರಂತೆ ನಮ್ಮ ಸ್ನೇಹಿತರು ಹಾಗೂ ಅಣ್ಣ ತಮ್ಮಂದಿರ ಜೊತೆಗೆ ಇಡೀ ಗ್ರಾಮ ಸುತ್ತುತ್ತಿದ್ದೇವು. ಅಲ್ಲಿ ಸಿಗುತ್ತಿದ್ದ ಮದ್ಯಪಾನದ ಬಾಟಲಿಗಳನ್ನು ತೆಗೆದುಕೊಂಡು ಗುಜರಿ ಅಂಗಡಿ ಅವನಿಗೆ ಕೊಡುತ್ತಿದ್ದೇವು. ಅವನು ಹತ್ತು ಇಪ್ಪತ್ತು ಕೊಟ್ಟು ಕಳುಹಿಸುತ್ತಿದ್ದ. ಇದನ್ನು ತೆಗೆದುಕೊಂಡು ಹೋಗಿ ಬಾಡಿಗೆ ಸೈಕಲ್ ಅವನಿಗೆ ಕೊಡುತ್ತಿದ್ದೇವು. ಯಾರನ್ನೋ ಮೆಚ್ಚಿಸಲು ಹೋಗಿ ಪೆಟ್ಟಾದ ಮುಖ, ಚಿಕ್ಕ ವಯಸ್ಸಿನಲ್ಲಿಯೇ ಸೈಕಲ್ ಕಲಿತಿದ್ದಾನೆ ಎಂದರೆ ತಂದೆ ತಾಯಿಗೆ ಅಜ್ಜ ಅಜ್ಜಿಯಂದಿರಿಗೆ ಇನ್ನಿಲ್ಲದ ಸಂತೋಷ.

READ | ಸಿಇಟಿ ಪರೀಕ್ಷೆ ಎದುರಿಸುವುದಕ್ಕೆ ಅಳುಕು ಇದೆಯೇ, ಹಾಗಾದರೆ, ಈ ಕಾರ್ಯಾಗಾರಕ್ಕೆ ಹಾಜರಾಗಿ

ಬಾಲ್ಯದ ಸ್ನೇಹಿತ ಸೈಕಲ್ ಗುರು
ಇತ್ತೀಚಿನ ಯುವ ಜನಾಂಗ ಐಷಾರಾಮಿ ಕಾರುಗಳ ಬಗ್ಗೆ ಮಾತನಾಡುತ್ತಾರೆ. ನಮ್ಮ ಕಾಲದಲ್ಲಿ ಸೈಕಲ್ಲೇ ನಮಗೆ ಐಷಾರಾಮಿ ವಾಹನ ನಮ್ಮ ಬಾಲ್ಯದ ಸ್ನೇಹಿತ ಎಂದರೆ ಸೈಕಲ್ ಎನ್ನುತ್ತಿದ್ದೇವು. ಅಟ್ಲಾಸ್ ಸೈಕಲ್ ಬಿಟ್ಟು ಬೇರೆ ಸೈಕಲ್ ಕಂಡರೆ ನಮಗೆ ಅದು ದೊಡ್ಡ ಐಷಾರಾಮಿ ಸೈಕಲ್ ಹಾಗೆ ಕಾಣುತ್ತಿತ್ತು. ನಮ್ಮಲ್ಲಿದ್ದ ಸೈಕಲ್ ಅನ್ನು ಹೆಚ್ಚು ಆಸಕ್ತಿಯಿಂದ ಪ್ರೀತಿಸುತ್ತಿದ್ದೇವು.
ಬಾಲ್ಯ ಜೀವನದ ನೆನಪುಗಳನ್ನು ಮೆಲುಕು ಹಾಕಿದಾಗ ಸೈಕಲ್ ಹಲವು ಸಿಹಿಯಾದ ಅನುಭವಗಳನ್ನು ನೀಡಿದೆ. ಆದರೆ, ಈಗ ಅದೆಲ್ಲ ನೆನಪು ಮಾತ್ರ.
ಸೂರಜ್ ಆರ್.ನಾಯರ್, ಸಾಗರ

Guest Column | ಉತ್ತರ ಕನ್ನಡದ ನೆಲದಲ್ಲಿ ಕನ್ನಡ ಭಾಷೆಯ ಪ್ರಾಚೀನತೆ

Leave a Reply

Your email address will not be published.