ಸಿದ್ದರಾಮಯ್ಯ ವಿರುದ್ಧ ಮತ್ತೆ ಈಶ್ವರಪ್ಪ ವಾಗ್ದಾಳಿ, ಮಾಡಿದ ಆರೋಪಗಳೇನು?

ಸುದ್ದಿ ಕಣಜ.ಕಾಂ‌ | DISTRICT | POLITICAL NEWS
ಶಿವಮೊಗ್ಗ: ನಗರದಲ್ಲಿ‌ ಶನಿವಾರ ಕರೆದಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮತ್ತೆ ವಾಗ್ದಾಳಿ ಮಾಡಿದ್ದಾರೆ.

ಕೆ.ಎಸ್.ಈಶ್ವರಪ್ಪ ಮಾಡಿದ ಆರೋಪಗಳೇನು?

  • ಸಿದ್ದರಾಮಯ್ಯ ಯಾವಾಗ ಯಾರಿಗೆ ಒಳ್ಳೆಯದು ಮಾಡಿದ್ದಾರೆ. ಕುರುಬ ಸಮುದಾಯದ ವಿಶ್ವನಾಥ್, ಎಚ್.ಎಂ. ರೇವಣ್ಣ, ಮೇಟಿ, ಎಂಟಿಬಿ ನಾಗರಾಜ್ ಎಲ್ಲರನ್ನು ಕೈ ಬಿಟ್ಟರು. ರಾಜ್ಯದಲ್ಲಿ ಒಬ್ಬ  ಕುರುಬರನ್ನು ಬೆಳೆಸಲಿಲ್ಲ. ವೀರಶೈವ ಲಿಂಗಾಯತರನ್ನು ಒಡೆದು ಹಾಕಿದರು. ಅವರ ಶಾಪದಿಂದಲೇ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿದ್ದಾರೆ.
  • ಹಿಜಾಬ್ ವಿಷಯದಲ್ಲಿ ಮುಸಲ್ಮಾನ್ ವಿದ್ಯಾರ್ಥಿಗಳಿಗೆ ಯಾವುದೇ ಬುದ್ದಿವಾದ ಹೇಳಲಿಲ್ಲ. ಮುಸಲ್ಮಾನರನ್ನು ಬೆಳೆಯಲು ಬಿಡಲಿಲ್ಲ. ಮುಸಲ್ಮಾನ್ ನಾಯಕರನ್ನು ಸಿದ್ದರಾಮಯ್ಯ ಹಾಳು ಮಾಡಿದರು. ಅಲ್ಪಸಂಖ್ಯಾತರು, ದಲಿತರು, ಹಿಂದುಳಿದವರ ಬಳಸಿಕೊಂಡು ಮುಖ್ಯಮಂತ್ರಿ ಆದರೂ ಅಲ್ಪಸಂಖ್ಯಾತರು, ದಲಿತರು, ಹಿಂದುಳಿದವರನ್ನು ತುಳಿಯುವ ಕೆಲಸ ಮಾಡಿದರು.
  • ಸಿದ್ದರಾಮಯ್ಯ ಒಬ್ಬ ದೇಶದ್ರೋಹಿ, ಗೋಹತ್ಯೆ ಮಾಡುವವರಿಗೆ ಬೆಂಬಲ ನೀಡುವ ವ್ಯಕ್ತಿ. ರಾಷ್ಟ್ರ ದ್ರೋಹಿ ಪಕ್ಷದ ನಾಯಕ ಸಿದ್ದರಾಮಯ್ಯ. ಅಂತಹವರ ಜತೆಗೆ ಯಾವುದೇ ಕಾರಣಕ್ಕೂ ಹೊಂದಾಣಿಕೆ ಇಲ್ಲ. ಸಿದ್ದರಾಮಯ್ಯ ಅವರ ಧೂಳು ನನಗೆ ಅವಶ್ಯಕತೆ ಇಲ್ಲ. ಅವರು ಸಮಾಜವನ್ನು ಒಡೆಯುವ ಕೆಲಸ ಮಾಡಿದ್ದಾರೆ

ಶಿವಮೊಗ್ಗ ಮಹಾನಗರ ಪಾಲಿಕೆ ಆಡಳಿತ ಪಕ್ಷದ ನಾಯಕ ಎಸ್.ಎನ್ ಚನ್ನಬಸಪ್ಪ, ಬಿಜೆಪಿ ಮುಖಂಡ ನಾಗರಾಜ್ ಇದ್ದರು.

ನಾನು ಕುರುಬರ ಲೀಡರ್ ಅಲ್ಲ, ಹಿಂದುತ್ವ ಪ್ರತಿಪಾದಕ

Leave a Reply

Your email address will not be published.