ಹೊಸ‌ ಶಿಕ್ಷಣ ಕಾಯ್ದೆಯಲ್ಲಿ ‘ಕ್ರೀಡೆ’ ಕಡ್ಡಾಯ ಪಠ್ಯಕ್ರಮ: ಗೆಹ್ಲೋಟ್

ಸುದ್ದಿ ಕಣಜ.ಕಾಂ‌ | DISTRICT | KUVEMPU UNIVERSITY
ಶಿವಮೊಗ್ಗ: ಕರ್ನಾಟಕದಲ್ಲಿ ‘ಹೊಸ ಶಿಕ್ಷಣ ನೀತಿ’ಯ ಪರಿಚಯದೊಂದಿಗೆ, ‘ಕ್ರೀಡೆ’ಯನ್ನು ‘ಕಡ್ಡಾಯ ಪಠ್ಯಕ್ರಮ’ದ ಭಾಗವಾಗಿ ಮಾಡಲಾಗಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಹೇಳಿದರು.
ಕುವೆಂಪು ವಿಶ್ವವಿದ್ಯಾಲಯದ 31 ಮತ್ತು 32ನೇ ಘಟಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತದಲ್ಲಿ ಕ್ರೀಡಾ ಚಟುವಟಿಕೆಗಳನ್ನು ಉತ್ತೇಜಿಸಲು, ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ಅನೇಕ ಪರಿಣಾಮಕಾರಿ ಯೋಜನೆಗಳನ್ನು ರೂಪಿಸಿದೆ ಮತ್ತು ಜಾರಿಗೊಳಿಸಿದೆ. ಅದರ ಫಲಿತಾಂಶ ಒಲಿಂಪಿಕ್ ಹಾಗೂ ಪ್ಯಾರಾ ಒಲಂಪಿಕ್ ನಲ್ಲಿ ಹೆಚ್ಚು ಪದಕಗಳನ್ನು ಗೆಲ್ಲಲಾಗಿದೆ ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿ(national education policy) 2020-21ನೇ ಶತಮಾನದ ಮೊದಲ ಶಿಕ್ಷಣ ನೀತಿಯಾಗಿದೆ. ನಮ್ಮ ದೇಶದ ಅಭಿವೃದ್ಧಿಯನ್ನು ಬಲಪಡಿಸಲು ಅಗತ್ಯವಾದ ಅವಶ್ಯಕತೆಗಳನ್ನು ಪೂರೈಸುವುದು ಇದರ ಗುರಿಯಾಗಿದೆ ಎಂದರು.

READ | ಒಂದೇ ವರ್ಷ 2 ಘಟಿಕೋತ್ಸವಗಳಿಗೆ ಸಾಕ್ಷಿಯಾದ ಕುವೆಂಪು ವಿವಿ, ‘ಚಿನ್ನ’ದ ಹುಡುಗಿಯರ ಮಾತುಗಳಿವು…

ವಿವಿಗೆ ಕುವೆಂಪು ನಾಮಕರಣ
ಕುವೆಂಪು ವಿಶ್ವವಿದ್ಯಾನಿಲಯವು ನಮ್ಮ ರಾಜ್ಯದ ಪ್ರಮುಖ ವಿಶ್ವವಿದ್ಯಾನಿಲಯಗಳಲ್ಲಿ ಒಂದಾಗಿದೆ, ಇದು ಶ್ರೇಷ್ಠ ಬರಹಗಾರ ಮತ್ತು ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನು ಇಡಲಾಗಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಕುವೆಂಪು ಅವರಿಗೆ 1958 ರಲ್ಲಿ ‘ರಾಷ್ಟ್ರಕವಿ’ ಮತ್ತು 1992 ರಲ್ಲಿ ‘ಕರ್ನಾಟಕ ರತ್ನ’ ಬಿರುದು ನೀಡಲಾಯಿತು. ಅವರು ‘ವಿಶ್ವ ಮಾನವತಾವಾದ’ಕ್ಕೆ ಕೊಡುಗೆ ನೀಡಿದರು ಮತ್ತು ಕರ್ನಾಟಕ ರಾಜ್ಯ ಗೀತೆ ‘ಜೈ ಭಾರತ ಜನನಿಯ ತನುಜಾತೆ’ ಬರೆದ ಕುವೆಂಪು ಅವರ ಆದರ್ಶ ನಮ್ಮೆಲ್ಲರಿಗೆ ಪ್ರೇರಣೆ ಎಂದರು.
ಈ ವಿಶ್ವವಿದ್ಯಾನಿಲಯವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದೆ. ವಿವಿಧ ಚಟುವಟಿಕೆಗಳಲ್ಲಿ ಅನೇಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದೆ.
ಘಟಿಕೋತ್ಸವದಲ್ಲಿ‌ ಸಿಎಫ್.ಟಿಆರ್.ಐ ನಿರ್ದೇಶಕಿ ಡಾ. ಶ್ರೀದೇವಿ ಎ. ಸಿಂಗ್ ಮುಖ್ಯ ಅತಿಥಿಗಳ ಭಾಷಣ ಮಾಡಿದರು. ಕುಲಪತಿ ಪ್ರೊ. ವೀರಭದ್ರಪ್ಪ, ಕುಲಸಚಿವರಾದ ಅನುರಾಧ, ನವೀನ್ ಕುಮಾರ್ ಉಪಸ್ಥಿತರಿದ್ದರು.

‘ಓಲ್ಡ್ ಮಾಂಕ್’ ರಹಸ್ಯ ಬಿಚ್ಚಿಟ್ಟ ಡೈರೆಕ್ಟರ್ ಶ್ರೀನಿ, ಶಿವಮೊಗ್ಗ ಬಗ್ಗೆ ಹೇಳಿದ್ದೇನು?

Leave a Reply

Your email address will not be published.