ಪಂಚಾಯಿತಿಯಲ್ಲಿ ಕುಸಿದು ಬಿದ್ದ ವೃದ್ಧೆ, ಗ್ರಾಮ ಲೆಕ್ಕಾಧಿಕಾರಿಗೆ ಕಾರಣ ಕೇಳಿ ನೋಟಿಸ್

Hosanagara map

 

 

ಸುದ್ದಿ ಕಣಜ.ಕಾಂ | TALUK | SHOW CAUSE NOTICE 
ಶಿವಮೊಗ್ಗ: ಹೊಸನಗರ ತಾಲೂಕಿನ ನಾಗೋಡಿ ವೃತ್ತದ ಗ್ರಾಮ ಲೆಕ್ಕಾಧಿಕಾರಿ ಡಿ.ಪಿ.ಮಂಜಪ್ಪ ಅವರಿಗೆ ಹೊಸನಗರದ ತಹಸೀಲ್ದಾರ್ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ.
ಮೌಖಿಕ ಮತ್ತು ಲಿಖಿತವಾಗಿ ಸೂಚನೆ ನೀಡಿದರೂ ಗ್ರಾ.ಲೆ. ವೃತ್ತದಲ್ಲಿ ಹಾಜರು ಇರುವುದಿಲ್ಲ. ಅನಧಿಕೃತವಾಗಿ ಗೈರು ಹಾಜರಾಗುವುದು ಹಾಗೂ ಸರ್ಕಾರಿ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುತ್ತಿರುವುದರಿಂದ ಸಾರ್ವಜನಿಕರ ಕೆಲಸಗಳಿಗೆ ತೊಂದರೆ ಆಗುತ್ತಿದೆ ಎಂದು ಕಾರಣ ಕೇಳಿ ನೋಟಿಸ್ ನಲ್ಲಿ ತಹಸೀಲ್ದಾರ್ ಅವರು ತಿಳಿಸಿದ್ದಾರೆ.

show cause notice
ಪಿಂಚಣಿ ಮಾಡಿಸಲು ಬಂದ ವೃದ್ಧೆ ಕುಸಿದುಬಿದ್ದರು
ಜೂನ್ 16ರಂದು ಪಿಂಚಣಿ ಮಾಡಿಸಲು ಸಾದಮ್ಮ ಎಂಬ ವೃದ್ಧೆ ಹೆಬ್ಬಿಗೆ ಗ್ರಾಮದಿಂದ ನಿಟ್ಟೂರು ಗ್ರಾಮದವರೆಗೆ ಸುಮಾರು 7 ಕಿ.ಮೀ. ಕಾಲ್ನಡಿಗೆಯಲ್ಲಿ ಬಂದು ನಿಟ್ಟೂರು ಗ್ರಾಮದಲ್ಲಿ ಕಾಯುತ್ತಿದ್ದರೂ ಗ್ರಾಮ ಲೆಕ್ಕಾಧಿಕಾರಿ ಸ್ಥಳಕ್ಕೆ ಮಧ್ಯಾಹ್ನ 1 ಗಂಟೆಯಾದರೂ ಹೋಗದೇ ಇದುದ್ದರಿಂದ ವೃದ್ಧೆಯು ಅಸ್ವಸ್ಥರಾಗಿರುವುದಾಗಿ ಅಲ್ಲಿನ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಸಾರ್ವಜನಿಕರು ವಿರುದ್ಧ ಪ್ರತಿಭಟನೆ ನಡೆಸಿ ಗ್ರಾಪಂನಲ್ಲಿ ದೂರು ನೀಡಿದ್ದಧಾರೆ.
ಕರ್ತವ್ಯದಲ್ಲಿ ಬೇಜವಾಬ್ದಾರಿ ಮತ್ತು ಅಸಡ್ಡೆಯನ್ನು ತೋರಿಸುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಶಿಲ್ತು ಕ್ರಮಕ್ಕೆ ಮೇಲಾಧಿಕಾರಿಗಳಿಗೆ ಏಕೆ ಶಿಫಾರಸು ಮಾಡಬಾರದು ಎಂಬ ಬಗ್ಗೆ ತಿಳಿವಳಿಕೆ ತಲುಪಿದ 24 ಗಂಟೆಯೊಳಗೆ ಲಿಖಿತ ಸಮಜಾಯಿಷಿ ಸಲ್ಲಿಸುವಂತೆ ಸೂಚಿಸಲಾಗಿದೆ.

https://suddikanaja.com/2020/12/19/road-transport-and-highways-minister-nitin-gadkari-inaugurated-689-crore-project-in-shivamogga/

Leave a Reply

Your email address will not be published. Required fields are marked *

error: Content is protected !!