ಆಸ್ಪತ್ರೆಯಲ್ಲಿ ಇಂಜೆಕ್ಷನ್ ಪಡೆದ 14 ಮಕ್ಕಳು ಅಸ್ವಸ್ಥ, ಹೇಗಿದೆ‌ ಈಗ ಮಕ್ಕಳ ಆರೋಗ್ಯ ಸ್ಥಿತಿ?

 

ಸುದ್ದಿ ಕಣಜ.ಕಾಂ | DISTRICT | HEALTH NEWS
ಶಿವಮೊಗ್ಗ: ಸಾಗರದ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಇಂಜೆಕ್ಷನ್ ಪಡೆದು ಅಸ್ವಸ್ಥರಾದ 14 ಮಕ್ಕಳಲ್ಲಿ ಮೂವರನ್ನು‌ ಶಿವಮೊಗ್ಗದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು, ಅದರಲ್ಲಿ ಇಬ್ಬರು ಖಾಸಗಿ‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.

READ | ರಿಷಬ್‍ಶೆಟ್ಟಿ ಸಿನಿಮಾ ಆಡಿಷನ್‍ನಲ್ಲಿ ಶಿವಮೊಗ್ಗದ ಸ್ಟೈಲ್ ಡ್ಯಾನ್ಸ್ ಸಂಸ್ಥೆಯ ಮೂವರು ಮಕ್ಕಳು

ನಡೆದಿದ್ದೇನು?
ಜ್ವರ, ಶೀತ, ಕೆಮ್ಮು‌ ಕಾರಣಗಳಿಂದ ಆಸ್ಪತ್ರೆಗೆ ದಾಖಲಾಗಿ‌ ಚಿಕಿತ್ಸೆ ಪಡೆಯುತ್ತಿದ್ದ ಮಕ್ಕಳಿಗೆ ಭಾನುವಾರ ಇಂಜೆಕ್ಷನ್ ನೀಡಲಾಗಿದೆ. ಕೆಲ ಹೊತ್ತಲ್ಲೇ ಮಕ್ಕಳು ಪ್ರಜ್ಞೆ ತಪ್ಪಿದ್ದಾರೆ. ತೀವ್ರ ಚಳಿಯಿಂದ ನರಳಾಡಲು‌ಆರಂಭಿಸಿದ್ದಾರೆ. ಇದರಿಂದ ವೈದ್ಯಕೀಯ‌ ಸಿಬ್ಬಂದಿ ಹಾಗೂ ಪೋಷಕರು ಗಾಬರಿಯಾಗಿದ್ದಾರೆ. ಶೀತ, ಕೆಮ್ಮು ಹೊರತು‌ ಮತ್ತೇನೂ ಸಮಸ್ಯೆ ಇರದ ಮಕ್ಕಳ ಆರೋಗ್ಯ ಏಕಾಏಕಿ ಹದಗೆಟ್ಟಿದ್ದರಿಂದ ಪೋಷಕರು ಆಸ್ಪತ್ರೆಯ ವೈದ್ಯರ ಮೇಲೆ ಕಿಡಿಕಾರಿದ್ದಾರೆ. ಕೆಲಹೊತ್ತು ಆಸ್ಪತ್ರೆಯಲ್ಲಿ ಗೊಂದಲದ ವಾತಾವರಣ ಕೂಡ ಸೃಷ್ಟಿಯಾಗಿತ್ತು. ಶಾಸಕ ಹಾಲಪ್ಪ ಅವರು‌ ಆಸ್ಪತ್ರೆಗೆ ಧಾವಿಸಿ ಮಕ್ಕಳ ಯೋಗಕ್ಷೇಮ ವಿಚಾರಿಸಿದ್ದಾರೆ.‌ ವಿಶೇಷವಾಗಿ ಆರೈಕೆ ಮಾಡುವಂತೆ ವೈದ್ಯರಿಗೆ ಸೂಚನೆ ನೀಡಿದ್ದಾರೆ.
ಅಸ್ವಸ್ಥಗೊಂಡ ಮಕ್ಕಳು‌ ಈಗ ಆರೋಗ್ಯ
ಭಾನುವಾರ ಅಸ್ವಸ್ಥಗೊಂಡ‌ ನಂತರ ಮಕ್ಕಳಿಗೆ ಸಾಗರದಲ್ಲಿಯೇ ಚಿಕಿತ್ಸೆ ನೀಡಲಾಗಿದೆ. ಅದರಲ್ಲಿ ಮೂವರಿಗೆ ಹೆಚ್ಚುವರಿ ಚಿಕಿತ್ಸೆಯ ಅಗತ್ಯವಿದ್ದ ಕಾರಣದಿಂದಾಗಿ ಮೆಗ್ಗಾನ್ ಗೆ ಕಳುಹಿಸಲಾಗಿದೆ. ಇಲ್ಲಿ ಚಿಕಿತ್ಸೆ ನೀಡಿದ ನಂತರ ಮಕ್ಕಳ ಆರೋಗ್ಯ ಸಹಜ ಸ್ಥಿತಿಗೆ‌ ಬಂದಿದೆ. ಇದುವರೆಗೆ ಯಾವ ಕಾರಣಕ್ಕಾಗಿ ಈ ರೀತಿ ಮಕ್ಕಳಲ್ಲಿ‌ ತಲೆದೋರಿದೆ ಎಂದು‌‌ ಖಚಿತವಾಗಿ‌ ತಿಳಿದುಬಂದಿಲ್ಲ. ಸ್ಯಾಂಪಲ್ ಕಳುಹಿಸಿದ್ದು,‌ ಪ್ರಯೋಗಾಲಯದ ವರದಿ ಬಳಿಕವೇ ಕಾರಣ‌ ತಿಳಿಯಲಿದೆ ಎಂದು ಮೂಲಗಳು ತಿಳಿಸಿವೆ.

GOOD NEWS | ಆಯುಷ್ಮಾನ್ ಕಾರ್ಡ್ ಇದ್ದರೆ ಕೋವಿಡ್ ಗೂ ಉಚಿತ ಚಿಕಿತ್ಸೆ, ರೆಮಿಡಿಸಿವಿರ್ ಇಂಜೆಕ್ಷನ್ ಕೂಡ ಫ್ರಿ, ಖಾಸಗಿ ಆಸ್ಪತ್ರೆ ದರಪಟ್ಟಿ ಇಲ್ಲಿದೆ

Leave a Reply

Your email address will not be published.