ಶಿವಪ್ಪ ನಾಯಕ ವೃತ್ತದಲ್ಲಿ ಕಾಂಗ್ರೆಸ್ ಧರಣಿ ಸತ್ಯಾಗ್ರಹ

 

ಸುದ್ದಿ ಕಣಜ.ಕಾಂ | DISTRICT | AGNIPATH SCHEME
ಶಿವಮೊಗ್ಗ: ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಅಗ್ನಿಪಥ್ ಯೋಜನೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಶಿವಪ್ಪನಾಯಕ ವೃತ್ತದಲ್ಲಿ ಸೋಮವಾರ ಧರಣಿ ಸತ್ಯಾಗ್ರಹ ಮಾಡಲಾಯಿತು.
ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆ ಅಡಿ ಅಗ್ನಿವೀರರನ್ನು ನಾಲ್ಕು ವರ್ಷ ನೇಮಿಸಿಕೊಳ್ಳುತ್ತಿದ್ದು, ದೇಶದಾದ್ಯಂತ ಭಾರೀ ವಿರೋಧಕ್ಕೆ ಕಾರಣವಾಗಿದೆ. 4 ವರ್ಷಗಳ ನಿಗದಿತ ಒಪ್ಪಂದದ ಅವಧಿ ಮೀರಿ ಅಗ್ನಿವೀರರನ್ನು ಮುಂದುವರಿಸುವುದಿಲ್ಲ ಎನ್ನುವುದು ಅಗ್ನಿಪಥ್ ಯೋಜನೆಯ ಕಾಯ್ದೆಯಾಗಿದೆ. ಇದು ಅವೈಜ್ಞಾನಿಕ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

READ | ಶಿವಮೊಗ್ಗದಲ್ಲಿ ಸ್ವಯಂ ಉದ್ಯೋಗ ಆರಂಭಿಸಬೇಕೆ? ಹಾಗಾದರೆ ಕೂಡಲೇ ಅರ್ಜಿ ಸಲ್ಲಿಸಿ

ಕೇಂದ್ರದ ಬಿಜೆಪಿ ಸರ್ಕಾರ ಉದ್ಯೋಗ ಸೃಷ್ಟಿಸಲಾಗದೆ ಅಗ್ನಿಪಥ್ ಯೋಜನೆಯ ಮೂಲಕ ಯುವಕರನ್ನು ಅದರಲ್ಲೂ ಸೇನಾ ಆಕಾಂಕ್ಷಿಗಳನ್ನು ಬೀದಿಗೆ ತಂದು ಅವರ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ. ಈ ಯೋಜನೆ ದೇಶದ ಭದ್ರತೆ ಮತ್ತು ಯುವಕರ ಭವಿಷ್ಯಕ್ಕೆ ಮಾರಕವಾಗಿರುವುದರಿಂದ ಈ ಯೋಜನೆಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್ ನೇತೃತ್ವದಲ್ಲಿ ನಡೆದ ಧರಣಿ ಸತ್ಯಾಗ್ರಹದಲ್ಲಿ ಪಕ್ಷದ ಪ್ರಮುಖರಾದ ರಮೇಶ್ ಶಂಕರಘಟ್ಟ, ಎಸ್.ಕೃಷ್ಣ, ಕೆ. ದೇವೇಂದ್ರಪ್ಪ, ಇಸ್ಮಾಯಿಲ್ ಖಾನ್, ಕೃಷ್ಣಪ್ಪ, ವಿಜಯಲಕ್ಷ್ಮೀ ಪಾಟೀಲ್, ಎಲ್. ರಾಮೇಗೌಡ, ಇಕ್ಕೇರಿ ರಮೇಶ್, ಸ್ಟೆಲ್ಲಾ ಮಾರ್ಟಿನ್, ಪ್ರೇಮಾ, ನಾಜೀಮಾ, ಸಿ.ಎಸ್. ಚಂದ್ರಭೂಪಾಲ ಉಪಸ್ಥಿತರಿದ್ದರು.

ಕೆಪಿಟಿಸಿಎಲ್ ನೇಮಕಾತಿ ರದ್ದತಿ ವಿರುದ್ಧ ಸಿಡಿದೆದ್ದ ಉದ್ಯೋಗ ಆಕಾಂಕ್ಷಿಗಳು, ಮುಂದೇನಾಯ್ತು?

Leave a Reply

Your email address will not be published.