ಸುದ್ದಿ ಕಣಜ.ಕಾಂ | DISTRICT | CITIZEN VOICE
ಶಿವಮೊಗ್ಗ: ಮಲೆನಾಡಿನ ಕುಗ್ರಾಮಗಳಲ್ಲಿ ಒಂದಿಲ್ಲೊಂದು ಸಮಸ್ಯೆಗಳಿವೆ. ಇಲ್ಲೊಂದು ಗ್ರಾಮದಲ್ಲಿ ಪಾರ್ಶ್ವವಾಯು (paralysis) ಪೀಡಿತ ತಾಯಿಯನ್ನು ಚಿಕಿತ್ಸೆಗಾಗಿ ಜೋಲಿಯಲ್ಲಿ ಕಟ್ಟಿ ಹೊತ್ತು ಕರೆದೊಯ್ದ ದೃಶ್ಯ ಚರ್ಚೆಗೆ ಗ್ರಾಸವಾಗಿದೆ.
ದೊಣ್ಣೆಗೆ ಬಟ್ಟೆ ಕಟ್ಟಿ ಮಕ್ಕಳು 75 ವರ್ಷ ತನ್ನ ತಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
READ | ಭದ್ರಾವತಿಯಲ್ಲಿ 24 ವರ್ಷಗಳ ಬಳಿಕ ನಡೆಯಲಿದೆ ಜಾತ್ರಾ ಮಹೋತ್ಸವ, ಏನಿದರ ವಿಶೇಷ?
ರಸ್ತೆ ಸಂಪರ್ಕವಿಲ್ಲ, ಬೇಕಿದೆ ಆಡಳಿತದ ಸ್ಪಂದನೆ
ಕಾರ್ಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಎಸ್.ವಿ.ಪಿ. ಕಾಲೋನಿಯ ಚರ್ಚ್ ಮೌಂಟ್ ಬಳಿ ನಿವಾಸಿ ಅಚ್ಚಮ್ಮ (75) ಎಂಬುವವರನ್ನು ದೊಣ್ಣೆಗೆ ಬಟ್ಟೆಯನ್ನು ಕಟ್ಟಿ ಹೊತ್ತು ಆಸ್ಪತ್ರೆಗೆ ಸಾಗಿಸಲಾಗಿದೆ.
ಈ ಕಾಲೋನಿಯಲ್ಲಿ ಸುಮಾರು 12 ಮನೆಗಳಿದ್ದು, 50 ಜನ ವಾಸವಾಗಿದ್ದಾರೆ. ಈ ಮನೆಗಳಿಂದ ಡಾಂಬಾರು ರಸ್ತೆ ಮುಕ್ಕಾಲು ಕಿ.ಮೀ. ದೂರವಿದ್ದು, ಈ ರಸ್ತೆಯಲ್ಲಿ ಯಾವುದೇ ವಾಹನಗಳು ಬರುವುದು ಕಷ್ಟ. ಹೀಗಾಗಿ, ಯಾರಿಗೇ ಆರೋಗ್ಯ ಸಮಸ್ಯೆ ಉಂಟಾದರೆ ಅವರನ್ನು ಇದೇ ರೀತಿ ಹೊತ್ತು ತರಬೇಕಾದ ಅನಿವಾರ್ಯತೆ ಇದೆ.
ಈ ವಿಚಾರವನ್ನು ಹಲವು ಸಲ ಪಂಚಾಯಿತಿ ಗಮನಕ್ಕೂ ತರಲಾಗಿದೆ. ಆದರೆ, ಪ್ರಯೋಜನವಾಗಿಲ್ಲ. ಕೂಡಲೇ ರಸ್ತೆ ನಿರ್ಮಿಸಿಕೊಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
https://suddikanaja.com/2021/08/26/mini-bridge-collapse-people-suffering-to-travel/