ಗಾಂಧಿ ಬಜಾರ್ ಚಾಕು ಇರಿತ ಪ್ರಕರಣಕ್ಕೆ ಟ್ವಿಸ್ಟ್, ನಾಲ್ವರ ವಿರುದ್ಧ ಕೇಸ್

police

 

 

ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಗಾಂಧಿ ಬಜಾರಿನ (Gandhi bazar) ಬಟ್ಟೆ ಮಾರ್ಕೆಟ್’ನಲ್ಲಿ ವ್ಯಕ್ತಿಯೊಬ್ಬರ ಮೇಲೆ ಚಾಕು ಇರಿದಿದ್ದ ಪ್ರಕರಣ ಸಂಬಂಧ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಹುಡುಕಾಟ ನಡೆದಿದೆ.

READ | ಗಾಂಧಿ ಬಜಾರ್ ನಲ್ಲಿ ಮಾರಕಾಸ್ತ್ರಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಬೆನ್ನಲ್ಲೇ ಆತಂಕ

ಸೆಂಥಿಲ್ ಎಂಬಾತನ ಮೇಲೆ ಒಬ್ಬ ಚಾಕು ಇರಿದಿರುವುದಾಗಿ ಹೇಳಲಾಗಿತ್ತು. ಆದರೆ, ಜೋರ್ ಬಜಾರಿನ ಜೋಗಿ ಸಂತು, ರಮೇಶ್, ಲೋಕೇಶ್ ಸೇರಿ ನಾಲ್ವರು ಚಾಕು ಇರಿದಿರುವುದಾಗಿ ತಿಳಿದುಬಂದಿದೆ. ಘಟನೆಗೆ ದ್ವೇಷವೇ ಕಾರಣ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ.
ಮಂಗಳವಾರ ರಾತ್ರಿ ಸೆಂಥಿಲ್ ಮೇಲೆ ಮೂರ್ನಾಲ್ಕು ಸಲ ಚಾಕುವಿನಿಂದ ಇರಿಯಲಾಗಿದೆ. ಲೋಕೇಶನ ಅಂಗಡಿ ಪಕ್ಕದಲ್ಲಿಯೇ ಸೆಂಥಿಲ್ ಬಟ್ಟೆಯ ಅಂಗಡಿ ಕೂಡ ಇದ್ದು, ಬಟ್ಟೆ ಇಡುವ ವಿಚಾರವಾಗಿ ಗಲಾಟೆ ನಡೆಯುತ್ತಲೇ ಇತ್ತು. ಹಣಕಾಸು ಮತ್ತು ಅಂಗಡಿ ವಿಚಾರವಾಗಿಯೂ ಹಣಕಾಸಿನ ವ್ಯವಹಾರ ನಡೆದಿತ್ತು. ದೊಡ್ಡಪೇಟೆ ಪೊಲೀಸ್ ಠಾಣೆ (Doddapete police station) ಯಲ್ಲಿ ಪ್ರಕರಣ ದಾಖಲಾಗಿದ್ದು, ಗಾಯಾಳು ಸೆಂಥಿಲ್ ಹೆಚ್ಚುವರಿ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದುಕೊಂಡು ಹೋಗಲಾಗಿದೆ.

https://suddikanaja.com/2021/05/07/dacoit-on-road-side-accused-arrested/

Leave a Reply

Your email address will not be published. Required fields are marked *

error: Content is protected !!