ಸುದ್ದಿ ಕಣಜ.ಕಾಂ | DISTRICT | WATER SUPPLY
ಶಿವಮೊಗ್ಗ: ಹೊನ್ನಾಳಿ ರಸ್ತೆಯ ಫ್ಲೈಓವರ್ ಮುಂಭಾಗದ ಶ್ರೀ ಮಹೇಶ್ವರಮ್ಮ ದೇವಸ್ಥಾನದ ಕಟ್ಟೆಯ ಮೇಲೆ ಸುಮಾರು 30-40 ವರ್ಷದ ಅನಾಮಧೇಯ ವ್ಯಕ್ತಿ(unknown person)ಯೊಬ್ಬರು ಮಲಗಿದ್ದಲ್ಲೇ ಮೃತಪಟ್ಟಿರುತ್ತಾರೆ.
ಮೃತನು ಸುಮಾರು 5.2 ಅಡಿ ಎತ್ತರ, ದೇಹವು ಕೊಳೆತು ಊದಿಕೊಂಡಿದೆ. ಮೈಮೇಲೆ ತಿಳಿ ಗುಲಾಬಿ ಬಣ್ಣದ ತುಂಬು ತೋಳಿನ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ಮೃತರ ವಾರಸುದಾರರು ಯಾರಾದರೂ ಇದ್ದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.