ಸುದ್ದಿ ಕಣಜ.ಕಾಂ | DISTRICT | JOB JUNCTION
ಶಿವಮೊಗ್ಗ: 2021-22 ನೇ ಸಾಲಿನ ನಾಗರೀಕ ಪೊಲೀಸ್ ಕಾನ್ಸ್’ಟೆಬಲ್ (police constable recruitment) ಹುದ್ದೆಗಳ ನೇಮಕಾತಿ ಸಂಬಂಧ ಶಿವಮೊಗ್ಗ ಜಿಲ್ಲಾ ಪೊಲೀಸ್ ಘಟಕದ ಒಟ್ಟು 108 ನಾಗರಿಕ ಪೊಲೀಸ್ ಕಾನ್ಸ್’ಟೆಬಲ್ ಹುದ್ದೆಗಳಲ್ಲಿ ಒಟ್ಟು 14 ಹುದ್ದೆಗಳಿಗೆ ಎರಡನೇ ತಾತ್ಕಾಲಿಕ ಪಟ್ಟಿಯನ್ನು ಜಿಲ್ಲಾ ಪೊಲೀಸ್ ಕಚೇರಿಯ ಸೂಚನಾ ಫಲಕದಲ್ಲಿ ಜೂನ್ 15 ರ ಅಪರಾಹ್ನ ಪ್ರಕಟಿಸಲಾಗಿದೆ.
ಅಂತೆಯೇ ಎರಡನೇ ಆಯ್ಕೆ ಪಟ್ಟಿಯಲ್ಲಿ ಸಿಪಿಸಿ 11 ಮತ್ತು ಮಪಿಸಿ 3 (ನೇರ) ಅಭ್ಯರ್ಥಿಗಳಿಗೆ ಜೂ.20 ರಂದು ದಾಖಲಾತಿ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ