ಕೇಂದ್ರದಿಂದ 5 ವರ್ಷ ಜಿ.ಎಸ್.ಟಿ. ಪರಿಹಾರ ನೀಡಲು ಆಗ್ರಹ, ಕಾರಣವೇನು?

 

ಸುದ್ದಿ ಕಣಜ.ಕಾಂ | DISTRICT | YOUTH CONGRESS
ಶಿವಮೊಗ್ಗ: ರಾಜ್ಯಗಳಿಗೆ ಜಿ.ಎಸ್.ಟಿ (Goods and Service Tax) ಪರಿಹಾರ ಕೊಡುವುದನ್ನು ಇನ್ನೂ ಐದು ವರ್ಷಗಳ ಅವಧಿಗೆ ಕೇಂದ್ರ ಸರ್ಕಾರ ಮುಂದುವರಿಸಬೇಕು. ಇಲ್ಲವಾದರೆ ಕರ್ನಾಟಕಕ್ಕೆ ವಾರ್ಷಿಕ 20 ಸಾವಿರ ಕೋಟಿ ರೂಪಾಯಿ ನಷ್ಟವಾಗಲಿದೆ ಎಂದು ಜಿಲ್ಲಾ ಯುವ ಕಾಂಗಗ್ರೆಸ್ ಆಗ್ರಹಿಸಿದೆ.
2017ರ ಜುಲೈದಿಂದ ಜಾರಿಯಾಗಿದ್ದ ಜಿ.ಎಸ್.ಟಿ ಪರಿಹಾರ ವ್ಯವಸ್ಥೆ ಗುರುವಾರ (ಜೂ.30) ಕೊನೆಗೊಂಡಿದೆ. ಚಂಡಿಗಢದಲ್ಲಿ ಮೂರು ದಿನಗಳ ಹಿಂದೆ ನಡೆದ 47ನೇ ಜಿ.ಎಸ್.ಟಿ ಕೌನ್ಸಿಲ್ ಸಭೆ(GST Counselling Meeting)ಯಲ್ಲಿ ಈ ಬೇಡಿಕೆ ಬಗ್ಗೆ ರಾಜ್ಯದ ಸಿಎಂ ಬಸವರಾಜ್ ಬೊಮ್ಮಾಯಿ (basavaraj bommai) ಸೇರಿ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯ ಸರ್ಕಾರಗಳ ಪ್ರತಿನಿಧಿಗಳು ತುಟಿಬಿಚ್ಚಿಲ್ಲ ಎಂದು ಜಿಲ್ಲಾಡಳಿತದ ಮೂಲಕ ಪ್ರಧಾನ ಮಂತ್ರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

READ | ಆಯನೂರಿನಲ್ಲಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ವ್ಯಕ್ತಿ ಅರೆಸ್ಟ್

ಮುಖ್ಯಮಂತ್ರಿ ವಿರುದ್ಧ ಆಕ್ರೋಶ
ಸಿಎಂ ಬೊಮ್ಮಾಯಿ ಅವರು ಜಿಎಸ್‍ಟಿ ಸಭೆಯಲ್ಲಿ ಪಾಲ್ಗೊಂಡರೂ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಮಾತನಾಡಿಲ್ಲ. ರಾಜ್ಯಗಳಿಂದ ಜಿಎಸ್‍ಟಿಯ ತೆರಿಗೆ ಹಣವನ್ನು ಪಡೆಯುತ್ತಿರುವ ಕೇಂದ್ರ ಸರ್ಕಾರ ರಾಜ್ಯಗಳಿಗೆ ಬರಬೇಕಾದ ತೆರಿಗೆಯ ಪರಿಹಾರ ಧನವನ್ನು ಕೇಳಿದರೆ ರಾಜ್ಯ ಸರ್ಕಾರಗಳು ಜಿಎಸ್‍ಟಿ ಪರಿಹಾರವನ್ನು ನೆಚ್ಚಿಕೊಳ್ಳದೆ ಪರ್ಯಾಯ ಆದಾಯದ ಮೂಲಗಳನ್ನು ಸೃಷ್ಟಿಸಿಕೊಳ್ಳಬೇಕು ಎಂದು ಆರ್ಥಿಕ ಸಚಿವೆ ನಿರ್ಮಲ ಸೀತಾರಾಮ್ ಅವರು ರಾಜ್ಯ ಸರ್ಕಾರಗಳಿಗೆ ಸಂದೇಶ ರವಾನಿಸುತಿರುವುದನ್ನು ನೋಡಿದರೆ ಕೇಂದ್ರ ಸರ್ಕಾರದ ದಿವಾಳಿತನ ಎದ್ದು ತರುತ್ತದೆ ಎಂದು ಆರೋಪಿಸಿದ್ದಾರೆ.
ಇದೇ ಸಭೆಯಲ್ಲಿ ಕೆಲವು ವಸ್ತುಗಳ ಮೇಲೆ ಶೇ.12 ಇದ್ದ ತೆರಿಗೆಯನ್ನು ಶೇ.18ಕ್ಕೆ ಹೆಚ್ಚಿಸಲಾಗಿದೆ. ರೈತರು ಹೊ ಗದ್ದೆಗಳಲ್ಲಿ ಬಳಸುವ ಸಬ್ ಮೆರಿನ್ ಪಂಪ್ ಗಳ ಮೇಲೆ ಶೇ.12 ಯನ್ನು ಶೇ.15ಕ್ಕೆ , ಹಾಲು ಕರೆಯುವ ಯಂತ್ರಗಳ ಮೇಲಿನ ತೆರಿಗೆಯನ್ನು ಶೇ.12ರಿಂದ ಶೇ.18ಕ್ಕೆ ಹೆಚ್ಚಿಸಿದ್ದಾರೆ. ಹಣ್ಣು, ತರಕಾರಿ ಮತ್ತು ಮೊಟ್ಟೆಗಳನ್ನು ಪ್ರತ್ಯೇಕಗೊಳಿಸುವ ಗ್ರೇಡಿಂಗ್ ಏರಿಕೆ ಮಾಡಲಾಗಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಪಿ..ಗಿರೀಶ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ರಂಗನಾಥ್, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಎಸ್.ಕುಮರೇಶ್, ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಇ.ಟಿ.ನಿತಿನ್, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷೆ ಶಿಲ್ಪಾ ಈಶ್ವರ್, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ರಾಹುಲ್, ಪುಷ್ಪಕ್ ಕುಮಾರ್, ಗ್ರಾಮಾಂತರ ಯುವ ಕಾಂಗ್ರೆಸ್ ಉಪಾಧ್ಯಕ್ಷ ಕಲ್ಲೂರು ವೆಂಕಟೇಶ್, ಪದಾಧಿಕಾರಿಗಳಾದ ಮೋಹನ್ ಸೋಮಿನಕೊಪ್ಪ, ಸಚಿನ್ ಇತರರು ಉಪಸ್ಥಿತರಿದ್ದರು.

ಜಿಎಸ್‍ಟಿ ಲೋಪದ ವಿರುದ್ಧ ಸಿಡಿದೆದ್ದ ಸಣ್ಣ, ಮಧ್ಯಮ ವ್ಯಾಪಾರಿಗಳು

Leave a Reply

Your email address will not be published.