ಸುದ್ದಿ ಕಣಜ.ಕಾಂ | DISTRICT | RAINFALL IN SHIVAMOGGA
ಶಿವಮೊಗ್ಗ: ಜಿಲ್ಲೆಯ ವಿವಿಧೆಡೆ ಸೋನೆ ಮಳೆ ಹಾಗೂ ಮೋಡ ಕವಿದ ವಾತಾವರಣವಿದೆ. ಆದರೆ, ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಮಾನ್ಸೂನ್ ಳೆ ಕೈಕೊಟ್ಟಿದೆ. ವರ್ಷಪೂರ್ತಿ ಚಂಡಮಾರುತಗಳಿಂದಾಗಿ ಮಳೆಯಾಗಿದ್ದು, ಬಹುತೇಕ ಎಲ್ಲ ಜಲಾಶಯಗಳಲ್ಲಿ ನೀರಿದೆ.
ಜೂನ್ 1ರಿಂದ ಜುಲೈ 3ರ ವರೆಗೆ 552.7 ಎಂಎಂ ಮಳೆಯಾಗಬೇಕು. ಆದರೆ 272.2 ಎಂಎಂ ವರ್ಷಧಾರೆಯಾಗಿದ್ದು ಶೇ.51ರಷ್ಟು ಮಳೆ ಕೊರತೆಯಾಗಿದೆ.
READ | ಅನಧಿಕೃತವಾಗಿ ಪ್ರಾಣಿ ವಧೆ, ಸಾಗಾಣಿಕೆ ತಡೆಯಲು ಸಮಿತಿ, ಡಿಸಿ ಖಡಕ್ ವಾರ್ನಿಂಗ್
ಮಲೆನಾಡಿನ ತಾಲೂಕುಗಳಲ್ಲೇ ಕೊರತೆ
ಮಲೆನಾಡಿನ ತಾಲೂಕುಗಳಾದ ತೀರ್ಥಹಳ್ಳಿ, ಹೊಸನಗರದಲ್ಲಿ ಶೇ.50ರಷ್ಟು ಮಳೆ ಕೊರತೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ 12.7 ಎಂಎಂ ಮಳೆಯಾಗಿದ್ದು, ಶೇ.53ರಷ್ಟು ಕೊರತೆಯಾಗಿದೆ.
ಜಲಾಯಗಳಲ್ಲಿ ನೀರಿನ ಮಟ್ಟ
ಭದ್ರಾ ಜಲಾಶಯದಲ್ಲಿ 154.3 ಅಡಿ ನೀರಿದ್ದು, 11,517 ಕ್ಯೂಸೆಕ್ಸ್ ಒಳಹರಿವು ಇದೆ. 128 ಕ್ಯೂಸೆಕ್ಸ್ ಹೊರ ಹರಿವು ಇದೆ. ಕಳೆದ ವರ್ಷ ಈ ದಿನ 155.1 ಅಡಿಯಷ್ಟು ನೀರಿತ್ತು.
ತಾಲೂಕು | ವಾಡಿಕೆ | ಮಳೆಯಾಗಿದ್ದು | ಕೊರತೆ % |
ಭದ್ರಾವತಿ | 121.7 | 84.4 | -31 |
ಹೊಸನಗರ | 801.4 | 398 | -50 |
ಸಾಗರ | 581.3 | 470.4 | -19 |
ಶಿಕಾರಿಪುರ | 177.1 | 78.2 | -56 |
ಶಿವಮೊಗ್ಗ | 132.1 | 81.2 | -39 |
ಸೊರಬ | 336.6 | 164.4 | -51 |
ತೀರ್ಥಹಳ್ಳಿ | 668.9 | 332.9 | -50 |
ಜಿಲ್ಲೆಯ ಸರಾಸರಿ ಮಳೆ | 552.7 | 272.2 | -51 |
https://suddikanaja.com/2021/06/18/highest-rainfall-in-hosanagara/