‘ಬೆಂಕಿ’ ಗುಟ್ಟು ಬಿಚ್ಚಿಟ್ಟ ನಟ ಅನೀಶ್ ತೇಜೇಶ್ವರ್, ಯಾವಾಗ ರಿಲೀಸ್?

 

ಸುದ್ದಿ ಕಣಜ.ಕಾಂ | KARNATAKA | CINEMA 
ಶಿವಮೊಗ್ಗ: ವಿಂಕಿ ವಿಷನ್ ಪ್ರೊಡಕ್ಷನ್ ಬ್ಯಾನರ್ ಅಡಿ ಅನೀಶ್ ತೇಜೇಶ್ವರ್ ಅವರೇ ನಿರ್ಮಿಸುತ್ತಿರುವ ಎ.ಆರ್.ಬಾಬು ಅವರ ಪುತ್ರ ಶಾನ್ ನಿರ್ದೇಶನದ `ಬೆಂಕಿ’ ಚಿತ್ರ ಬಿಡುಗಡೆಗೆ ಡೇಟ್ ಫಿಕ್ಸ್ ಆಗಿದೆ.
ಪತ್ರಿಕಾ ಭವನದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ನಟ ಅನೀಶ್ ಚಿತ್ರದ ಸ್ಟೋರಿಯ ಗುಟ್ಟು ಬಿಚ್ಚಿಟ್ಟಿದ್ದಾರೆ. `ಚಿತ್ರದ ಹೆಸರು ಮಾತ್ರ ಬೆಂಕಿ. ಆದರೆ, ಇದು ಪಕ್ಕಾ ಸೆಂಟಿಮೆಂಟಲ್ ಸಿನಿಮಾ ಆಗಿದೆ. ಆಕ್ಷನ್ ಸಿನಿಮಾ ಇದಾಗಿದ್ದು, ನನ್ನದೇ ನಿರ್ಮಾಣದ ಮೂರನೇ ಸಿನಿಮಾ ಆಗಿದೆ. ಹಳ್ಳಿಯ ಹಿನ್ನೆಲೆಯಲ್ಲಿ ಸಾಗುವ ಈ ಕಥೆಯಲ್ಲಿ ಅಣ್ಣ-ತಂಗಿಯ ಸೆಂಟಿಮೆಂಟ್ ಚಿತ್ರದ ಪ್ರಧಾನ ವಸ್ತುವಾಗಿದೆ’ ಎಂದು ಹೇಳಿದರು.

READ | ಭದ್ರಾವತಿಯಲ್ಲಿ ಬಿಗುವಿನ ವಾತಾವರಣ, ಅಂಗಡಿ ಮೇಲೆ ಕಲ್ಲು ತೂರಾಟ

ಚಿತ್ರದಲ್ಲಿ ಶೃತಿ ಪಾಟೀಲ್, ಅಚ್ಯುತ್ ಕುಮಾರ್, ಸಂಪತ್, ಉಗ್ರಂ ಮಂಜು, ಹರಿಣಿ ಮುಖ್ಯ ಪಾತ್ರದಲ್ಲಿದ್ದಾರೆ. ಕೌಶಿಕ್ ಹರ್ಷ ಸಂಗೀತ ಸಂಯೋಜನೆ, ವಿನಸ್ ನಾಗರಾಜ್ ಮೂರ್ತಿ ಛಾಯಾಗ್ರಹಣವಿದೆ. ನಾಯಕಿಯಾಗಿ ರೈಡರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಸಂಪದ ಹುಲಿವಾನ ಅಭಿನಯಿಸಿದ್ದಾರೆ. ಚಿತ್ರವು ಮೈಸೂರು, ಬಾಗೇಪಲ್ಲಿ ಮತ್ತು ತಮಿಳುನಾಡಿನ ಗಡಿಯಾದ ಹೊಸೂರು ಸೇರಿದಂತೆ ಹಲವೆಡೆ ಚಿತ್ರೀಕರಣಗೊಂಡಿದೆ.
ಅನೀಶ್ ನಟಿಸಿರುವ ಚಿತ್ರಗಳಿವು
ಅನೀಶ್ ತೇಜೇಶ್ವರ್ ಅವರು 2010ರಲ್ಲಿ ‘ಪೊಲೀಸ್ ಕ್ವಾರ್ಟರ್ಸ್’ ಚಿತ್ರದ ಮೂಲಕ ಬೆಳ್ಳಿ ಪರದೆಯ ಮೇಲೆ ಕಾಣಿಸಿಕೊಂಡಿದ್ದು, ನಂತರ ನಮ್ ಏರಿಯಾಲಿ ಒಂದ್ ದಿನ, ಕಾಫಿ ವಿತ್ ಮೈ ವೈಫ್, ನನ್ ಲೈಫ್ ಅಲ್ಲಿ, ಎಂದೆಂದು ನಿನಗಾಗಿ, ನೀನೆ ಬರೀ ನೀನೆ, ಅಕಿರಾ, ವಾಸು ನಾನ್ ಪಕ್ಕಾ ಕಮರ್ಷಿಯಲ್, ರಾಮಾರ್ಜುನ, ಬೆಂಕಿ ಚಿತ್ರಗಳಲ್ಲಿ ನಟಿಸಿದ್ದಾರೆ.
ಪ್ರಶಾಂತ್ ಮಾತನಾಡಿ, ರಾಮಾರ್ಜುನ ಸಿನಿಮಾಕ್ಕೆ ಶಿವಮೊಗ್ಗದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಜುಲೈ 15ರಂದು ಬಿಡುಗಡೆಯಾಗಲಿರುವ ಬೆಂಕಿ ಚಿತ್ರವನ್ನು ಥಿಯೇಟರ್ ಬಂದು ವೀಕ್ಷಿಸಿ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಲಖ್ನೌನಲ್ಲಿ ನಡೆದ ರೀಯಲ್ ಘಟನೆ ಆಧಾರಿತ ಸಸ್ಪೆನ್ಸ್ ಥ್ರಿಲ್ಲರ್ ಮೂವಿಯಲ್ಲಿ ಮಿಂಚಿರುವ ಶಿವಮೊಗ್ಗೆಯ ಪ್ರತಿಭೆಗಳು, ಯಾವುದೀ ಚಿತ್ರ, ಎಂದು ತೆರೆಗೆ?

Leave a Reply

Your email address will not be published.